ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.68 ಕೋಟಿ ರೂಪಾಯಿ ಮೌಲ್ಯದ 2 ಕೆಜಿ 579 ಗ್ರಾಂ ಚಿನ್ನವನ್ನು ಜಪ್ತಿ ಕಸ್ಟಮ್ಸ್ ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದ್ದಾರೆ. ಚಿನ್ನ ಸಾಗಿಸುತ್ತಿದ್ದದ್ದ ಮುರ್ತಾಜಿಮ್, ಶೇಖ್ ಮೊಹಮ್ಮದ್ ಇಮ್ರಾನ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ದುಬೈನಿಂದ ಬೆಂಗಳೂರಿಗೆ EK 564 ವಿಮಾನದಲ್ಲಿ ಬಂದಿದ್ದರು.
ಆರೋಪಿಗಳು ವಿದೇಶದಿಂದ ಬಟ್ಟೆಗಳಲ್ಲಿ ಮರೆಮಾಚಿ ಚಿನ್ನ ತಂದಿದ್ದರು. ಸದ್ಯ ಇಬ್ಬರನ್ನೂ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ದುಬೈಯಿಂದ ಬಂದ ವ್ಯಕ್ತಿಯೊಬ್ಬರ ಬ್ಯಾಗ್ನಲ್ಲಿ ಬರೋಬ್ಬರಿ 40 ಐಫೋನ್ ಹಾಗೂ 5 ಆ್ಯಪಲ್ ವಾಚ್ಗಳು ಕಂಡುಬಂದು ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಪ್ರಕರಣ ಬುಧವಾರವಷ್ಟೇ ವರದಿಯಾಗಿತ್ತು. ಇದೀಗ ಅದರ ಬೆನ್ನಲ್ಲೇ 1.68 ಕೋಟಿ ರೂಪಾಯಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ