ಹುಬ್ಬಳ್ಳಿಯ ವೈಷ್ಣದೇವಿ ದೇವಸ್ಥಾನದ ಧರ್ಮಾಧಿಕಾರಿ ಹತ್ಯೆಗೆ ಆತ ಮಾಡುತ್ತಿದ್ದ ಮಾಟ ಮಂತ್ರವೇ ಕಾರಣ ಎಂದು ಕೊಲೆ ಆರೋಪಿ ಸಂತೋಷ ಭೋಜಗಾರ ಒಪ್ಪಿಕೊಂಡಿದ್ದಾನೆ. ಆರೋಪಿಯ ಬಂಧನದ ವೇಳೆ ಆರೋಪಿಯೇ ಈ ಸತ್ಯವನ್ನು ಹೇಳಿಕೊಂಡಿದ್ದಾನೆ. ಹತ್ಯೆಯಾದ ದೇವೇಂದ್ರಪ್ಪಜ್ಜ ಮಾಟ, ಮಂತ್ರ ಮಾಡುತ್ತಿದ್ದ. ದೇವೇಂದ್ರಪ್ಪಜ್ಜನಿಂದ ನನ್ನ ಅತ್ತೆ-ಮಾವ ಮಾಟ ಮಂತ್ರ ಮಾಡಿಸುತ್ತಿದ್ದರು. ಇವರಿಂದ ಎಷ್ಟೋ ಮನೆಗಳು ಹಾಳಾಗಿವೆ. ನಮ್ಮ ಕುಟುಂಬದವರಿಗೆ ಅನಾರೋಗ್ಯ ಉಂಟಾಗಿದೆ.
ಹೀಗಾಗಿ 6 ವರ್ಷಗಳಿಂದ ಕೊಲೆ ಮಾಡಲು ಸಂಚು ಮಾಡಿದ್ದೆ ಎಂದು ಆತ ಹೇಳಿಕೊಂಡಿದ್ದಾನೆ.ಎರಡು ವರ್ಷಗಳ ಹಿಂದೆ ಪ್ಲಾನ್ ಮಾಡಿದ್ದೆ ಮಿಸ್ ಆಗಿತ್ತು. ಆದರೆ ಈ ಬಾರಿ ಪಕ್ಕಾ ಕೊಲೆ ಮಾಡಿ ಹತ್ಯೆ ಮಾಡಿರುವೆ. ದೇವೇಂದ್ರಪ್ಪಜ್ಜನ ಜೀವ ನಾನು ತೆಗೆದುಕೊಂಡಿದ್ದೆನೆ. ಇವನು ಸತ್ತಿದ್ದಕ್ಕೆ ಎಷ್ಟೋ ಕುಟುಂಬಗಳು ನೆಮ್ಮದಿಯಿಂದ ಇವೆ ಎಂದು ಕೊಲೆ ಆರೋಪಿ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.