
ಬಿಡದಿ ಪಟ್ಟಣದ ನಿವಾಸಿ ಡಾಮಿಯನ್ ಎಮ್ಯಾನುಯೆಲ್ ಡಿಸೋಜಾ ಎಂಬುವರು ಮೊಬೈಲ್‌ಗೆ ಬಂದ ಲಿಂಕ್ ಓಪನ್ ಮಾಡಿ ₹98,811 ಕಳೆದುಕೊಂಡಿದ್ದಾರೆ. ಮೊಬೈಲ್‌ಗೆ ಎರಡು ಲಿಂಕ್ ಬಂದಿದ್ದವು. ಇವನ್ನು ಓಪನ್ ಮಾಡಿ ನೋಡಿದ ನಂತರ ಡಿಲೀಟ್ ಮಾಡಿದ್ದರು. ಅದಾದ ನಂತರ ಅನಾಮಧೇಯ ಪೋನ್ ನಂಬರ್‌ನಿಂದ ಕರೆ ಬಂದಿತ್ತು.
ಅದನ್ನು ಸ್ವೀಕರಿಸಿದ ನಂತರ ಡಿಸೋಜಾ ಅವರ ಬ್ಯಾಂಕ್ ಖಾತೆಯಿಂದ ಹಂತ, ಹಂತವಾಗಿ ಹಣ ಕಡಿತವಾಯಿತು.ಬ್ಯಾಂಕ್‌ಗೆ ತೆರಳಿ ಈ ಬಗ್ಗೆ ವಿಚಾರಣೆ ಮಾಡಿದಾಗ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ತಿಳಿಯಿತು. ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಡಿಸೋಜಾ ದೂರು ದಾಖಲಿಸಿದ್ದಾರೆ.