October 13, 2025
peru plane crash

ಪೆರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಭೀಕರ ದುರಂತ ಸಂಭವಿಸಿದೆ. ಅಗ್ನಿಶಾಮಕ ಟ್ರಕ್‌ಗೆ ವಿಮಾನ ಒಂದು ಡಿಕ್ಕಿ ಹೊಡೆದಿದೆ. ಪೆರುವಿನ ಜಾರ್ಜ್ ಚಾವೆಜ್‌ನಲ್ಲಿ ನಡೆದ ಈ ದುರಂತದಲ್ಲಿ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿಅಪ್ ಲೋಡ್ ಆಗಿದ್ದು ವೈರಲ್ ಆಗಿದೆ.
ಅಗ್ನಿಶಾಮಕ ಟ್ರಕ್ ರನ್‌ವೇಯಲ್ಲಿ ವೇಗವಾಗಿ ಚಲಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಎದುರುಗಡೆ ಲ್ಯಾಂಡ್ ಆಗುತ್ತಿದ್ದ ವಿಮಾನ ಕಂಡ ಟ್ರಕ್ ನಲ್ಲಿದ್ದ ಸಿಬ್ಬಂದಿ ಬೆದರಿದ್ದಾರೆ. ಅಪಘಾತವನ್ನು ತಪ್ಪಿಸಲು ಯೂ ಟರ್ನ್ ಮಾಡಿದ್ದಾರೆ. ಆದರೂ ಅಪಘಾತ ಸಂಭವಿಸಿದೆ. ತಪ್ಪಿಸಲು ಸಾಧ್ಯವಾಗಿಲ್ಲ. ವಿಮಾನ ವೇಗವಾಗಿ ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

Leave a Reply

Your email address will not be published. Required fields are marked *