
ರೇಣುಕಾಸ್ವಾಮಿ ಕೊಲೆಯಾದ ಬಳಿಕ ಅವರ ಕುಟುಂಬಸ್ಥರ ಜೀವನ ಅತಂತ್ರವಾಗಿದೆ. ಮನೆಯಲ್ಲಿ ರೇಣುಕಾಸ್ವಾಮಿ ಅವರೇ ಆಧಾರಸ್ತಂಭವಾಗಿದ್ದರು. ಅವರ ಕುಟುಂಬಕ್ಕೆ ನೆರಳಾಗಿದ್ದರು. ಅವರ ದುಡಿಮೆಯಿಂದಲೇ ಅವರ ಕುಟುಂಬಸ್ಥರ ಜೀವನ ಸಾಗುತ್ತಿತ್ತು. ಆದರೀಗ ರೇಣುಕಾಸ್ವಾಮಿ ಪೋಷಕರು ಹಾಗೂ ಗರ್ಭಿಣಿ ಪತ್ನಿಗೆ ದಿಕ್ಕು ತೋಚದಂತಾಗಿದೆ.
ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯಹಸ್ತ ಚಾಚಲು ನಟ ದರ್ಶನ ತೂಗುದೀಪ ಯೋಚನೆ ಮಾಡಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಈ ವಿಷಯವನ್ನು ದರ್ಶನ್ ಮುಂದೆ ಕುಟುಂಬಸ್ಥರು ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಹಾಗೂ ಕುಟುಂಬಸ್ಥರು ಮೃತ ರೇಣುಕಾಸ್ವಾಮಿ ಪತ್ನಿ ಹಾಗೂ ಮಗುವಿಗೆ ಸಹಾಯ ಮಾಡುವ ಯೋಚನೆಯಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ದರ್ಶನ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಿದ ಕುಟುಂಬಸ್ಥರು ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡುವ ವಿಷಯವನ್ನು ದಚ್ಚು ಮುಂದೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ದರ್ಶನ್ ಕೂಡ ಒಪ್ಪಿಗೆ ಸೂಚಿಸಿದ್ದು ಜೈಲಿನಿಂದ ಹೊರ ಬಂದ ಬಳಿಕ ರೇಣುಕಾಸ್ವಾಮಿ ಪೋಷಕರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ದರ್ಶನ್ ಕುಟುಂಬಸ್ಥರು ಈ ಸಲಹೆಯನ್ನು ನೀಡಿದ್ದು ಇದಕ್ಕೆ ರೇಣುಕಾಸ್ವಾಮಿ ಪೋಷಕರು ಒಪ್ಪುತ್ತಾರಾ ಎನ್ನುವ ಪ್ರಶ್ನೆ ಎದುರಾಗಿದೆ.