
ಸ್ಯಾಂಡಲ್ ವುಡ್ ನ ಅನೇಕ ಹಾಡುಗಳಿಗೆ ಧ್ವನಿಯಾದ ಹಂಸಲೇಖ ಅವರು ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಕಾಯ್ದುಕೊಂಡಿದ್ದಾರೆ. ತಮ್ಮ ಹಾಡುಗಳ ಮೂಲಕ ಪ್ರತಿಯೊಬ್ಬರನ್ನು ಮೋಡಿ ಮಾಡುವ ಹಂಸಲೇಖ ಅವರು ಆಗಾಗ ವೈಯಕ್ತಿವಾಗಿ ಕೆಲವೊಮ್ಮೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.
ಸದ್ಯ ಜೈನ್ ಸಮುದಾಯಕ್ಕೆ ವಿಡಿಯೋ ಮೂಲಕ ಹಾಗೂ ಪತ್ರದ ಮುಖೇನ ಬಹಿರಂಗವಾಗಿ ಹಂಸಲೇಖ ಕ್ಷಮೆ ಕೇಳಿದ್ದಾರೆ.
ಇತ್ತೀಚೆಗಷ್ಟೇ ಹಂಸಲೇಖ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಬುಲ್‌ಶಿಟ್ ಎಂಬ ಪದ ಅವರ ಬಾಯಿಂದ ಬಂದಿದೆ. ಅದರ ಜೊತೆಗೆ ಜೈನ ಸಮುದಾಯದ ನಂಬಿಕೆ ಬಗ್ಗೆಯೂ ಹಂಸಲೇಖ ಮಾತನಾಡಿದ್ದರು. ಈ ಕಾರಣಗಳಿಂದ ಜೈನ ಸಮುದಾಯಕ್ಕೆ ಹಂಸಲೇಖ ಕ್ಷಮೆ ಕೇಳಿದ್ದಾರೆ.