November 19, 2024

ಬೆಂಗಳೂರು: ಆನ್‌ಲೈನ್‌ನಲ್ಲಿ ಮಕ್ಕಳ ಆಶ್ಲೀಲ ದೃಶ್ಯಗಳನ್ನು (ಚೈಲ್ಡ್ ಫೋರ್ನೋಗ್ರಫಿ ) ನೋಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67 ‘ಬಿ’ ಅನ್ವಯ ಅಪರಾಧವಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಅದೇ ಆರೋಪದಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ವಾಸಿ ಎನ್.ಇನಾಯತ್ ಉಲ್ಲಾ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಏಕಸದಸ್ಯ ಪೀಠ ರದ್ದು ಮಾಡಿದೆ. ಇನಾಯತ್ ಉಲ್ಲಾ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ “ಐಟಿ ಕಾಯಿದ ಸೆಕ್ಷನ್ 67ಬಿ ಉಲ್ಲೇಖಿಸಿ, “ವಿದ್ಯುನ್ಮಾನ ವಿಧಾನದಲ್ಲಿ ಮಕ್ಕಳ

ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡುವುದು, ಬೇರೆಯವರಿಗೆ ಕಳುಹಿಸುವುದು ಅಪರಾಧವಾಗಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಸುಮ್ಮನೆ ಆಶ್ಲೀಲ ದೃಶ್ಯಗಳನ್ನು ನೋಡಿದ್ದಾರಷ್ಟೇ.
ಹಾಗಾಗಿ, ಅದು ಆರೋಪಿಸಲಾದ ಸೆಕ್ಷನ್ ವ್ಯಾಪ್ತಿಗೆ ಒಳಪಡುವುದಿಲ್ಲ” ಎಂದು ಆದೇಶಿಸಿದೆ.”ಅರ್ಜಿದಾರರು ಬಹುಶಃ ಅಶ್ಲೀಲ ದೃಶ್ಯಗಳನ್ನು ನೋಡುವ ಚಟಕ್ಕೆ ದಾಸರಾಗಿರಬಹುದು. ಹಾಗಾಗಿ, ಅವರು ಅದನ್ನು ನೋಡಿದ್ದಾರೆನಿಸುತ್ತದೆ. ಅದು ಬಿಟ್ಟರೆ ಅವರ ವಿರುದ್ಧ ಬೇರೆ ಆರೋಪಗಳೂ ಇಲ್ಲ. ಅದಕ್ಕೆ ಸಾಕ್ಷ್ಯವೂ ಇಲ್ಲ. ಹಾಗಾಗಿ, ಅವರ ವಿರುದ್ಧದ ಕ್ರಿಮಿನಲ್ ಪ್ರಕರಣ ಮುಂದುವರಿಸಲಾಗದು. ಒಂದು ವೇಳೆ ಮುಂದುವರಿಸಿದರೆ ಅದು ಕಾನೂನಿನ ದುರ್ಬಳಕೆ ಯಾಗಲಿದೆ” ಎಂದು ಅರ್ಜಿಯನ್ನು ಮಾನ್ಯ ಮಾಡಿ ಪ್ರಕರಣ ರದ್ದುಗೊಳಿಸಿದೆ.

ಪ್ರಕರಣದ ಹಿನ್ನೆಲೆ: 2022ರ ಮಾ.23ರಂದು ಮಧ್ಯಾಹ್ನ ಆರೋಪಿ ವೆಬ್‌ಸೈಟ್‌ನಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು (ಚೈಲ್ಡ್ ಪೋರ್ನೋಗ್ರಫಿ) ನೋಡುತ್ತಿದ್ದರು ಎಂದು ಘಟನೆ ನಡೆದ ಎರಡು ತಿಂಗಳ ಬಳಿಕ ಅಂದರೆ 2023ರ ಮೇ 3ರಂದು ದೂರು ದಾಖಲಾಗಿತ್ತು. ಅದು ಐಟಿ ಕಾಯಿದೆ 67ಬಿ ಪ್ರಕಾರ ಅಪರಾಧ ಎಂದು ಆರೋಪಿಸಲಾಗಿತ್ತು. ಅರ್ಜಿದಾರರು ಪ್ರಕರಣ ರದ್ದು ಕೋರಿ ಹೈಕೋರ್ಟ್‌ನ ಮೊರೆ ಹೋಗಿದ್ದರು.

Leave a Reply

Your email address will not be published. Required fields are marked *