
ರಾಜಧಾನಿ ಬೆಂಗಳೂರಲ್ಲಿ ಪೊಲೀಸರು ಮಾನವೀಯತೆಯನ್ನೇ ಮರೆತಿದ್ದಾರೆ. ಯಶವಂತಪುರದ ತ್ರಿವೇಣಿ ಟಾಕೀಸ್ ಬಳಿ ಅಪಘಾತವಾಗಿ ಬಿದ್ದಿದ್ದ ಗಾಯಾಳುವನ್ನು ಬೇಗ ಆಸ್ಪತ್ರೆಗೆ ಸೇರಿಸದೇ ನೋಡುತ್ತಾ ನಿಂತಿದ್ದರು. ಕಿವಿಯಲ್ಲಿ ರಕ್ತ ಬರ್ತಿದೆ. ಬನ್ನಿ ಬೇಗ ಆಸ್ಪತ್ರೆಗೆ ಸೇರಿಸೋಣ ಅಂದ್ರೂ ತಮ್ಮ ಹೊಯ್ಸಳ ವಾಹನದಲ್ಲಿ ಆ ವ್ಯಕ್ತಿಯನ್ನ ಕರೆದೊಯ್ಯಲಿಲ್ಲ.
ಅಯ್ಯಪ್ಪ.. ಸತ್ತೇ ಹೋಗ್ತಾನೆ ಬನ್ರಿ ಅಂತಾ ಅಲ್ಲಿದ್ದ ಜನರೆಲ್ಲಾ ಕರೆದರೂ ಪೊಲೀಸರು ಜಪ್ಪಯ್ಯ ಎನ್ನಲಿಲ್ಲ. ನಮ್ಮ ವಾಹನ ಬೇಡ ಅಂತಾ ಹಠ ಮಾಡಿ ವಾದ ಮಾಡಿ ನಿಂತು ಕೊಂಡಿದ್ದರು. ಜೀವ ಹೋಗ್ತಿದ್ರೂ ಕೇರ್ ಮಾಡಲಿಲ್ಲ. ಕೊನೆಗೆ ಪ್ರೈವೇಟ್ ವಾಹನದಲ್ಲೇ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಪೊಲೀಸರ ಈ ಅಮಾನವೀಯತೆಯನ್ನು, ದರ್ಪವನ್ನ ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ