ಕಳೆದ ಒಂದು ತಿಂಗಳಿನಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 8658 ಪ್ರಕರಣಗಳು ದಾಖಲಾಗಿವೆ. ಏಳು ಜನ ಮೃತಪಟ್ಟಿದ್ದಾರೆ. ಆದರೆ ಈಗ ಆತಂಕಕ್ಕೆ ಕಾರಣವಾಗಿರುವುದು ಡೆಂಗ್ಯೂಗೆ ಮಕ್ಕಳಲ್ಲೇ ಹೆಚ್ಚು ಭಾದಿತರಾಗುತ್ತಿರುವುದು
ಕಳೆದ 24 ಗಂಟೆಯಲ್ಲಿ 1 ರಿಂದ 18 ವರ್ಷ ಒಳಗಿನ 154 ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಒಟ್ಟು ಜನವರಿಯಿಂದ ಇಲ್ಲಿಯವರೆಗೆ 1 ರಿಂದ 18 ವರ್ಷ ವಯಸ್ಸಿನ 2395 ಮಕ್ಕಳಿಗೆ ಡೆಂಗ್ಯೂ ಬಾಧಿಸಿದೆ. ಹೀಗಾಗಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವೈದ್ಯರು ಸೂಚಿಸಿದ್ದಾರೆ.
ಕಳೆದ 24 ಗಂಟೆಯಲ್ಲಿ 1 ವರ್ಷದೊಳಗಿನ ಏಳು ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಒಂದು ವಾರದ ಹಿಂದೆ ನಾಲ್ಕು ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ಜನೆವರಿಯಿಂದ ಒಟ್ಟು 150 ಮಕ್ಕಳಿಗೆ ಡೆಂಗ್ಯೂ ಪಾಸಿಟಿವ್ ಬಂದಿಸಿದೆ. ಒಟ್ಟಿನಲ್ಲಿ ಒಂದು ವರ್ಷದ ಮಕ್ಕಳಲ್ಲೂ ಡೆಂಘಿ ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚಿಸಿದೆ. ಪೋಷಕರು ಕೂಡಲೇ ಎಚ್ಚೆತ್ತು ತಮ್ಮ ಮನೆಗಳಲ್ಲಿ ಚಿಕ್ಕ ಮಕ್ಕಳು ಇದ್ದರೆ ಕೂಡಲೇ ಮುಂಜಾಗ್ರತೆ ವಹಿಸುವುದು ಒಳ್ಳೆಯದು.