ಬೆಂಗಳೂರಿನ ವಿ.ವಿ.ಪುರಂ ಕಾಲೇಜಿನ ಬಳಿ ಸ್ಕೂಟರ್‌ನಲ್ಲಿ ಹೋಗುವಾಗ ಕಾಲೇಜು ಹುಡುಗಿಯರು ಪಾದಾಚಾರಿ ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ತನ್ನ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಅಯೂಬ್ ಉರ್ ರೆಹೆಮಾನ್ ಕಲಾಸಿಪಾಳ್ಯದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದಾನೆ. ಆಗಾಗ ಬೈಕ್ ನಲ್ಲಿ ಬಂದು ಅಸಭ್ಯ ವರ್ತನೆ ಮಾಡಿ ಎಸ್ಕೇಪ್ ಆಗುತ್ತಿದ್ದನು. ಇನ್ನು ಪೊಲೀಸರು ಬಂಧಿಸಿ ಹೀಗೆಲ್ಲಾ ಮಾಡುತ್ತಿದ್ದಕ್ಕೆ ಕಾರಣವೇನು ಎಂದು ಕೇಳಿದರೆ, ನಾನು ಏನ್ ಮಾಡಿದ್ನೋ ನಂಗೆ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ಕೊಟ್ಟಿದ್ದಾನೆ. ಸದ್ಯ ವಿವಿ ಪುರಂ ಪೊಲೀಸರಿಂದ ಆರೋಪಿ ಅಯೂಬ್‌ನನ್ನು ವಿಚಾರಣೆ ಮಾಡಲಾಗುತ್ತಿದೆ