October 18, 2024

ಕೆಲಸದ ಒತ್ತಡ ತಾಳಲಾರದೆ ರೋಬೋಟ್ ಒಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ.

ತನ್ನಿಂದ ಹೆಚ್ಚು ಕೆಲಸ ಮಾಡಿಸಲಾಗುತ್ತಿದೆ ಎಂದು ಒತ್ತಡದಿಂದ ಬೇಸತ್ತು ರೋಬೋಟ್ ಮೆಟ್ಟಿಲುಗಳಿಂದ ಬಿದ್ದು ಸೂಸೈಡ್ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಅದು ಈ ರೀತಿಯ ವಿಚಿತ್ರ ಕೇಸ್ ಬೆಳಕಿಗೆ ಬಂದಿರುವುದು ಮಧ್ಯ ದಕ್ಷಿಣ ಕೊರಿಯಾದಲ್ಲಿ ಅನ್ನೋದು ಗಮನಾರ್ಹ.

5 ದಿನಗಳ ಹಿಂದೆ ರೋಬೋಟ್ ಮೆಟ್ಟಿಲುಗಳ ಮೇಲಿಂದ ಬಿದ್ದು ಸೂಸೈಡ್ ಮಾಡಿಕೊಂಡಿದೆ. ರೋಬೋಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವರ್ಕಿಂಗ್ ಕಂಡೀಷನ್‌ನಲ್ಲಿ ಇರಲಿಲ್ಲ. ರೋಬೋಟ್ ಓಡಿ ಹೋಗಿ ಸೂಸೈಡ್ ಮಾಡಿಕೊಂಡಿದೆ ಎಂದು ಘಟನೆ ನೋಡಿದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *