November 22, 2024

ಇದೇ ಮೊದಲ ಬಾರಿಗೆ ನಿತ್ಯಾನಂದ ಕೈಲಾಸದ ಸ್ಥಳವನ್ನು ಜುಲೈ 21ರಂದು ಪ್ರಕಟಿಸುವುದಾಗಿ ಘೋಷಿಸಿದ್ದಾನೆ.

ವಿವಾದಗಳ ಕೇಂದ್ರಬಿಂದು ಎನಿಸಿದ್ದ ನಿತ್ಯಾನಂದ ಅತ್ಯಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದನು. ಕಾನೂನು ಕುಣಿಕೆ ಬಿಗಿಯಾಗುತ್ತಿದ್ದಂತೆ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಲು ಸಜ್ಜಾಗುತ್ತಿದ್ದಂತೆ ನಿತ್ಯಾನಂದ ಕರ್ನಾಟಕ ಬಿಟ್ಟಿದ್ದ. ಬಳಿಕ ಮಧುರೈ ಅದೀನಂ ಉತ್ತರಾಧಿಕಾರಿ ಎಂದು ಘೋಷಿಸಲಾಯಿತು. ಇದು ಮತ್ತೊಂದು ವಿವಾದಕ್ಕೆ ಕಾರಣವಾಯಿತು.

ನಿತ್ಯಾನಂದ ತನ್ನ ವಿರುದ್ಧದ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು 2019 ರಲ್ಲಿ ಭಾರತದಿಂದ ಪಲಾಯನ ಮಾಡಿದ್ದಾನೆ. ಅಲ್ಲಿಂದ ಇಲ್ಲಿಯವರೆಗೂ ನಿತ್ಯಾನಂದ ಎಲ್ಲಿದ್ದಾನೆ ಎಂಬುದು ಗೊತ್ತಾಗಿಲ್ಲ. ಕೈಲಾಸ ಎಂಬ ದೇಶವನ್ನು ಹುಟ್ಟು ಹಾಕಿದ್ದೇನೆ ಎಂದು ಹೇಳುವ ನಿತ್ಯಾನಂದ ಪ್ರತ್ಯೇಕ ಧ್ವಜ ಹಾಗೂ ಪಾಸ್‌ ಪೋರ್ಟ್ ನೀಡಿ ಸಂಚಲನ ಮೂಡಿಸಿದ್ದ. ಅಲ್ಲದೇ
ಜಾಹೀರಾತು ನೀಡಿ ಕೈಲಾಸದಲ್ಲಿ ನೆಲೆಸಲು ಬಯಸುವವರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಘೋಷಿಸಿದ್ದ. ಆತನ ಕಡೆಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಕೈಲಾಸ ದೇಶವನ್ನು ಅಮೆರಿಕ ಮತ್ತು ವಿಶ್ವಸಂಸ್ಥೆ ಗುರುತಿಸಿದೆ ಎಂದು ವೆಬ್ ಸೈಟ್ ನಲ್ಲಿ ಫೋಟೋಗಳನ್ನು ಹಾಕಿದ್ದರು

ಕೆಲ ತಿಂಗಳ ಹಿಂದೆ ನಿತ್ಯಾನಂದನ ಆರೋಗ್ಯ ಸರಿಯಿಲ್ಲ ಎಂಬ ಸುದ್ದಿ ಬಂದಿತ್ತು. ನಂತರ ಎಂದಿನಂತೆ ಯೂಟ್ಯೂಬ್ ಪೇಜ್ ಮೂಲಕ ನಿತ್ಯಾನಂದ ಪ್ರವಚನ ಆರಂಭಿಸಿದ್ದ. ಆದರೆ ಇಲ್ಲಿಯವರೆಗೂ ಕೈಲಾಸ ಯಾವ ಕಡೆ ಇದೆ ಎಂದು ನಿತ್ಯಾನಂದ ಬಾಯಿ ಬಿಟ್ಟಿಲ್ಲ.

ಇದೀಗ ನಿತ್ಯಾನಂದ ಕೈಲಾಸ ಎಲ್ಲಿದೆ ಎಂಬುದನ್ನು ತಿಳಿಸುವುದಾಗಿ ಹೇಳಿದ್ದಾನೆ. ಜುಲೈ 21ರಂದು ಕೈಲಾಸದ ಸ್ಥಳವನ್ನು ಪ್ರಕಟಿಸುವುದಾಗಿ ನಿತ್ಯಾನಂದ ಪ್ರಕಟಿಸಿದ್ದಾನೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರುವ ಪೋಸ್ಟ್‌ನಲ್ಲಿ ಹೀಗೆ ಹೇಳಲಾಗಿದೆ..

ಅದರಲ್ಲಿ ‘ಕೈಲಾಸ ತೆರೆಯಲಾಗಿದೆ. 21 ಗುರುಪೂರ್ಣಿಮೆ ದಿನದಂದು ಕೈಲಾಸದ ಸ್ಥಳವನ್ನು ಪ್ರಕಟಿಸಲಾಗುವುದು. ನಾವು ನಿಮ್ಮನ್ನು ಹೃತ್ತೂರ್ವಕವಾಗಿ ಸ್ವಾಗತಿಸುತ್ತೇವೆ, ‘ಈಗಲೇ ಕೈಲಾಸ ನಿವಾಸಿಯಾಗಿ ನೋಂದಾಯಿಸಿಕೊಳ್ಳಿ..

ಇದರ ವೆಬ್‌ಸೈಟ್ ಲಿಂಕ್ ಮತ್ತು ವಾಟ್ಸಾಪ್ ಸಂಖ್ಯೆಯನ್ನು ಸಹ ಅವರು ಹಂಚಿಕೊಂಡಿದ್ದಾರೆ. ನಿತ್ಯಾನಂದ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಕೈಲಾಸ ತೆರೆದುಕೊಂಡಿದೆ.. ಮನುಷ್ಯರನ್ನೆಲ್ಲ ಕರೆದಿದ್ದಾರೆ. ಕೈಲಾಸದ ಬಾಗಿಲು ತೆರೆದಿದೆ. ನಾನು ಬಾಗಿಲು ತೆರೆದರೂ. ನೀವು ಅದರ ಮೇಲೆ ಹೆಜ್ಜೆ ಹಾಕಿದರೆ ಮಾತ್ರ ನೀವು ಒಳಗೆ ಬರಬಹುದು

Leave a Reply

Your email address will not be published. Required fields are marked *