
ಹುಬ್ಬಳ್ಳಿ : ಸಾರ್ವಜನಿಕರಿಗೆ ಉಪಟಳವಾಗುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಹುಬ್ಬಳ್ಳಿ ನಗರದ ಪೊಲೀಸರಿಂದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಸಂಜೆ *ಪೊಲೀಸ್ ಏರಿಯಾ ಡಾಮಿನೇಷನ್* ಕ್ರಮ ಕೈಗೊಳ್ಳಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ 33 ಜನ ರೌಡಿ ಷೀಟರ್ ಗಳನ್ನೂ, 17 ಜನ ಹಳೇ MO ಗಳನ್ನೂ, 5 ಜನ ಹಳೆಯ ಗಾಂಝಾ ಮಾರಾಟಗಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಕೆಂಗಣ್ಣಿಗೆ ಗುರಿಯಾಗಿರುವರ ಹಿಂದಿನ ಹಾಗೂ ಇಂದಿನ ನಡವಳಿಕೆ ಹಾಗೂ ಅವರ ಚಟುವಟಿಕೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ, ಇವರುಗಳ ಮೇಲೆ ಸೂಕ್ತ ಕ್ರಮ ಕೈ ಗೊಳ್ಳಲಾಗುವುದು ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಇನ್ನು ಜೊತೆಗೆ ಸಾರ್ವಜನಿಕವಾಗಿ, ಹೊಸ ಲೇ ಔಟ್ ಗಳಲ್ಲಿ, ರಸ್ತೆಗಳಲ್ಲಿ ಕುಳಿತು ಮಧ್ಯವನ್ನು ಸೇವಿಸುತ್ತಿದ್ದ 24 ಜನರನ್ನೂ ಕೂಡ ವಶಕ್ಕೆ ಪಡೆಯಲಾಗಿದೆ. ಈ ಎಲ್ಲಾ 24 ಜನರ ಮೇಲೆಯೂ ಕಾನೂನು ಕ್ರಮ ಕೈ ಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ
ಸದ್ಯ ಪೊಲೀಸ್ ಕಮೀಷನರ್ ಶ್ರೀ ಶಶಿಕುಮಾರ್ IPS ಆದೇಶದಂತೆ,ಸಿಸಿಬಿ ಹಾಗೂ ದಕ್ಷಿಣ ಉಪ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂಧಿಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು. ಈ ರೀತಿಯ ಕಾರ್ಯವನ್ನು ಮುಂದೆಯೂ ನಿರಂತರವಾಗಿ ಕೈಗೊಳ್ಳಲಾಗುವುದು ತಿಳಿಸಲಾಗಿದ್ದು ಅಪರಾಧಿಗಳಿಗೆ ನಡುಕು ಶುರುವಾಗಿದೆ.