ವಾಣಿಜ್ಯ ನಗರಿ ಹುಬ್ಬಳ್ಳಿ ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೀಗಾಗಿ ಸಿಟಿಯಲ್ಲಿ ಹಸಿರೀಕರಣ ಹೆಚ್ಚಳ ಮಾಡಲು ಮಿಯಾವಾಕಿ ಫಾರೆಸ್ಟ್ ತಲೆ ಎತ್ತುತ್ತಿದೆ. 50,000 ಚದರ ಅಡಿ ಜಾಗದಲ್ಲಿ ಮಿನಿ ಫಾರೆಸ್ಟ್ ಗಳನ್ನ ನಿರ್ಮಾಣ ಮಾಡಲಾಗುತ್ತಿದೆ.ಇದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಕಾಂಗ್ರೆಸ್ ಮುಖಂಡ ಕೆಪಿಸಿಸಿ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಅವರ ರಜತ್ ಪೌಂಡೇಶನ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ವೀರೇಶ್ ಉಂಡಿ ಅವರ ಶ್ರೀ ದುರ್ಗಾ ಡೇವಲಪರ್ಸ್ ಕಾಳಜಿ
ಕಾಡು ಬೆಳೆಯಲು ಸುಮಾರು 100 ವರ್ಷಗಳಾದರೂ ಬೇಕು. ಪ್ರಕೃತಿ ಪರಿಸರ, ಮೂಲಭೂತ ಅವಶ್ಯಕತೆ, ಭೌಗೋಳಿಕ ಹಿನ್ನೆಲೆ, ರಕ್ಷಣೆ ಇವೆಲ್ಲದರ ಹಿನ್ನಲೆ ಗಮನದಲ್ಲಿಟ್ಟುಕೊಂಡು ಕಾಡು ಬೆಳೆಸಲು ಪರಿಶ್ರಮದ ಅಗತ್ಯವಿದೆ. ಆದರೆ ಕೇವಲ 10 – 20 ವರ್ಷಗಳಲ್ಲಿ ಕಿರು ಅರಣ್ಯ ಬೆಳೆಸುವ ಜಪಾನ್‌ನ ಮಿಯಾವಾಕಿ ಮಾದರಿಯ ಕಿರು ಅರಣ್ಯ ಪದ್ಧತಿಯ ಅನುಷ್ಠಾನ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಧಾರವಾಡದ ನೆಚ್ಚರ್ ಪಸ್ಟ್ ವಿಕೋ ವಿಲೇಜ್ ಮತ್ತು ನೆಚರ್ ರಿಸರ್ಚ್ ಸೆಂಟರ್ ಈ ಕಾರ್ಯವನ್ನು ಸಂಪೂರ್ಣಗೊಳಿಸಿದ್ದು.ನುರಿತ ತಜ್ಞರನ್ನು ಇದಕ್ಕೆ ಬಳಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ
ಈ ಮಿಯಾವಾಕಿ ಫಾರೆಸ್ಟ್ ಗಳು ಜಪಾನ್ ನಲ್ಲಿ ಟ್ರೆಂಡಿಂಗ್ ನಲ್ಲಿವೆ. ಹಲವು ವಿದೇಶಗಳಲ್ಲಿ ಈ ಮಿಯಾವಾಕಿಯಿಂದಾಗಿ ನಗರಗಳಲ್ಲಿ ಹೆಚ್ಚು ಹಸಿರೀಕರಣ ಹೆಚ್ಚಾಗಿದೆ. ಅದರಂತೆ ನಮ್ಮ ಹುಬ್ಬಳ್ಳಿಯಲ್ಲಿ ಮಿಯಾವಾಕಿ ಫಾರೆಸ್ಟ್ ನಿರ್ಮಾಣ ಮಾಡಿದ್ದು, ನೋಡುಗರ ಕಣ್ಮನ ಸೆಳೆಯತ್ತಿವೆ.
ಕುಸುಗಲ್ ರಸ್ತೆಯ ಜಯಗಂಗಾ ಲೇಔಟಿನ ಮಿಯಾವಾಕಿ ಫಾರೆಸ್ಟ್ ನಿರ್ಮಾಣ ಮಾಡಿದ್ದು, ಒಂದು ಎಕರೆಗಿಂತ ಹೆಚ್ಚು ಜಾಗದಲ್ಲಿ 1200ಕ್ಕೂ ಹೆಚ್ಚು ಬಗೆ ಬಗೆಯ ಗಿಡಗಳನ್ನ ಬೆಳೆಸಲಾಗಿದೆ. ಅಂದಹಾಗೇ ಈ ಮಿಯಾವಾಕಿ ಅಂದ್ರೆ ಖಾಲಿ ಬಿದ್ದಿರುವ ಜಾಗದಲ್ಲಿ ವಿವಿಧ ಬಗೆಯ ಗಿಡಗಳನ್ನ ಬೆಳೆಸಿ ಪರಿಸರ ಜಾಗೃತ ಮೂಡಿಸುವುದಾಗಿದೆ. ಇನ್ನು ಮಿಯಾವಾಕಿ ಫಾರೆಸ್ಟ್ ನಿರ್ಮಾಣಕ್ಕೆ ಒಟ್ಟು 5 ಲಕ್ಷ ವೆಚ್ಚ ತಗುಲಿದ್ದು, ಔಟ್ ಆಫ್ ಕಂಟ್ರಿ ಸೇರಿದಂತೆ ನಮ್ಮ ರಾಜ್ಯದ ಸ್ಥಳೀಯ ಗಿಡಗಳನ್ನ ನೆಟ್ಟು ಏರಿಯಾದ ಸುತ್ತ ಫಾರೆಸ್ಟ್ ನಿರ್ಮಿಸಲಾಗುತ್ತಿದೆ. ಈ ಫಾರೆಸ್ಟ್ನಿಂದಾಗಿ ಹಸಿರೀಕರಣ ಜೊತೆಗೆ ಅಂತರ್ಜಲ ಮಟ್ಟವು ಹೆಚ್ಚಾಗಲಿದ್ದು ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕೂಡ ಈ ಪಾರ್ಕ್ ನಿರ್ಮಾಣ ಮನ್ನಣೆ ನೀಡುತ್ತಿದೆ.
ಒಟ್ಟಲ್ಲಿ, ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿ ಮರಗಳ ಮಾರಣ ಹೋಮ ಆಗುತ್ತಿದೆ. ಆದ್ರೆ ಗಿಡಗಳನ್ನ ನೆಡುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಮಿಯಾವಾಕಿ ಫಾರೆಸ್ಟ್ ಗಳು ನಗರದೆಲ್ಲೆಡೆ ಮಾಡಿದ್ದೇ ಆದಾಲ್ಲಿ ನಗರದಲ್ಲಿ ಹಸಿರೀಕರಣ ಜಾಸ್ತಿಯಾಗಲಿದೆ. ಇನ್ನು ಇವಗಳನ್ನು ಪೋಷಿಸುವ ಜವಾಬ್ದಾರಿಯನ್ನು ಕೂಡ ಶ್ರೀ ದುರ್ಗಾ ಡೇವಲಪರ್ಸ್ ಹಾಗೂ ರಜತ್ ಪೌಂಡೇಶನ್ ವತಿಯಿಂದ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.