August 19, 2025
news_display_image_1719937706

ಆಸ್ತಿಗಾಗಿ ಮಾಟ ಮಂತ್ರ ಮಾಡಿದ್ದಾರೆ ಎಂದು ಆರೋಪಿಸಿ ಖ್ಯಾತ ಉದ್ಯಮಿ ಡಾ.ವಿಜಯ ಸಂಕೇಶ್ವರ ಪುತ್ರಿ, ಮಾಜಿ ಸಂಸದ ಎಸ್‌.ಬಿ ಸಿದ್ನಾಳರ ಕಿರಿಯ ಸೊಸೆ ದೀಪಾ ಸಿದ್ನಾಳ ಅವರು ಕಾನೂನು ಸಮರ ಸಾರಿದ್ದಾರೆ. ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೀಪಾ ಸಿದ್ನಾಳ ಅವರು BNS 1860, ಸೆಕ್ಷನ್ 120ಬಿ, 506, 307, ಮಾಟ ಮಂತ್ರ ಕಾಯ್ದೆ 2007 ಅಡಿಯಲ್ಲಿ ದೂರು ಕೂಡ ದಾಖಲಿಸಿದ್ದಾರೆ.

ಬೆಳಗಾವಿ ಮಾಜಿ ಸಂಸದರ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಉದ್ಯಮಿ ಡಾ.ವಿಜಯ ಸಂಕೇಶ್ವರ ಪುತ್ರಿ ದೀಪಾ ಸಿದ್ನಾಳ ಅವರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಿಜಯಕಾಂತ ಹಾಲಿನ ಡೇರಿ ಕಬಳಿಸಲು ಹುನ್ನಾರ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.

ಅಲ್ಲದೆ, ವಿಜಯಕಾಂತ ಡೇರಿ ಹಾಗೂ ಅದರ ಸ್ವತ್ತುಗಳನ್ನು ಕಬಳಿಸಲು ಮೃತ ಶಿವಕಾಂತ್​ರ ಸೋದರ ಶಶಿಕಾಂತ್ ಅವರು ಹುನ್ನಾರ ಮಾಡಿದ್ದಾರೆ. ಶಶಿಕಾಂತ್ ಸಿದ್ನಾಳ್, ಪತ್ನಿ ವಾಣಿ, ಪುತ್ರ ದಿಗ್ವಿಜಯ್ ವಿರುದ್ಧ ದೀಪಾ ಸಿದ್ನಾಳ್ ಅವರು FIR ದಾಖಲು ಮಾಡಿದ್ದಾರೆ

Leave a Reply

Your email address will not be published. Required fields are marked *