
ನಟ ದರ್ಶನ್ ಅವರು ಸದ್ಯ ಜೈಲಿನೊಳಕ್ಕೆ ಇರುವುದೇ ಒಳ್ಳೆಯದು. ಹೊರಗಡೆ ಇದ್ದರೆ ಅವರ ಜೀವಕ್ಕೇ ಅಪಾಯವಿದೆ. ಸುಮಾರು ಮೂರು ತಿಂಗಳ ಹಿಂದೆಯೇ ನನಗೆ ಈ ಬಗ್ಗೆ ನನ್ನ ತಾಯಿ (ದೇವಿ) ತಿಳಿಸಿದ್ದಾಳೆ. ನಟ ದರ್ಶನ್ ಅವರಿಗೆ ಪ್ರಾಣಾಪಾಯ ಇದೆ. ಅದನ್ನು ತಪ್ಪಿಸಲು ನಾನು ನನ್ನಿಂದಾಗುವ ಎಲ್ಲಾ ಪ್ರಯತ್ನ ಮಾಡುತ್ತೇನೆ. ಆದರೆ, ಅವರಿಗೆ ಸಮಸ್ಯೆ ಆಗಿರುವುದು ಒಂದು ಹೆಣ್ಣು ಅತೃಪ್ತ ದೇವರಿಂದಲೇ. ಆದ್ದರಿಂದಲೇ ನಟ ದರ್ಶನ್ ಅವರು ಮಹಿಳೆಯರಿಂದಲೇ ಶೋಷಣೆಗೆ ಒಳಗಾಗಿದ್ದಾರೆ, ಜೊತೆಗೆ, ಅವರಿಗೆ ಮಹಿಳೆಯರೇ ರಕ್ಷಣೆ ಕೂಡ ನೀಡುತ್ತಿದ್ದಾರೆ. ಈ ಘಟನೆಯಲ್ಲೂ ಎಲ್ಲವೂ ಮಹಿಳೆಯರ ಹೆಸರಿಗೇ ಸಂಬಂಧಿಸಿವೆ.
ಹೌದು, ನಟ ದರ್ಶನ್ ಅವರ ಸುತ್ತಮುತ್ತ ನಡೆದ ಘಟನೆಯನ್ನೇ ನೋಡಿ. ಪವಿತ್ರಾ ಗೌಡ ಅವರು ನಟ ದರ್ಶನ್ ಅವರ ಬಾಳಲ್ಲಿ ಬಂದು ಬಿರುಗಾಳಿ ಎದ್ದಿತು. ನಟ ದರ್ಶನ್ ಮನೆ ಇರುವುದು ರಾಜರಾಜೇಶ್ವರಿ ದೇವಾಲಯ ಇರುವ ರಾಜರಾಜೇಶ್ವರಿ ನಗರದಲ್ಲಿ. ಜೊತೆಗೆ, ರೇಣುಕಾಸ್ವಾಮಿ ಹೆಸರಿನಲ್ಲೂ ರೇಣುಕಾ ಇದ್ದಾಳೆ. ಕೊಲೆ ನಡೆದ ಸ್ಥಳ ಕೂಡ ಕಾಮಾಕ್ಷಿ ಪಾಳ್ಯ. ಅಲ್ಲೂ ಕೂಡ ಕಾಮಾಕ್ಷಿ ದೇವಿ ನೆಲೆಸಿದ್ದಾಳೆ. ಇನ್ನು ನಟ ದರ್ಶನ್ ಅವರಿಗೆ ಜೈಲು ವಾಸ ಆಗಿದ್ದು ಅನ್ನಪೂರ್ಣೇಶ್ವರಿ ನಗರದಲ್ಲಿ. ಇನ್ನು ಈಗಿರುವ ಪರಪ್ನ ಅಗ್ರಹಾರದ ಸಮೀಪ ಕೂಡ ಯಾವುದಾದರೂ ದೇವತೆಯ ಗುಡಿಯೋ, ದೇವಸ್ಥಾನವೋ ಖಂಡಿತವಾಗಿ ಇರಲೇಬೇಕು’ ಎಂದಿದ್ದಾರೆ ದೇವಿ ಭಕ್ತೆ ಮಹಿಳೆ.
ಈ ಎಲ್ಲಾ ಕಾರಣಗಳಿಂದ ನಟ ದರ್ಶನ್ ಅವರಿಗೆ ಜೈಲು ಸುರಕ್ಷಿತ ಸ್ಥಳ, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವಾಗ ಹೊರಗಡೆ ಬಂದರೆ ಒಳ್ಳೆಯದಾಗುತ್ತೋ ಆವಾಗ ಬರುತ್ತಾರೆ ಅವರು. ಏಕೆಂದರೆ, ನಟ ದರ್ಶನ್‌ಗೆ ಇರುವ ಅಪಾಯ, ಜೀವಕ್ಕೇ ಗಂಡಾಂತರ ಅಥವಾ ಜೀವನಕ್ಕೆ ಸಮಸ್ಯೆ ಇವೆಲ್ಲವುಗಳನ್ನೂ ಮೊದಲೇ ತಿಳಿಸಿರುವ ದೇವಿ, ಅವರಿಗೆ ಬರಬಹುದಾದ ಸಮಸ್ಯೆಯ ಬಹುಭಾಗವನ್ನು ತಪ್ಪಿಸಿ ಅವರು ಜೀವಂತವಾಗಿ ಇರುವಂತೆ ನೋಡಿಕೊಂಡಿದ್ದಾಳೆ ಎಂದು ಆ ಮಹಿಳೆ ಹೇಳಿದ್ದಾರೆ. ಹೀಗಾಗಿ, ನಟ ದರ್ಶನ್ ಪ್ರಾಣ ಕಾಪಾಡುವ ನಿಟ್ಟಿನಲ್ಲಿಯೇ ಅವರು ಇಂಥ ಘೋರ ಆರೋಪದಲ್ಲಿ ಸಿಲುಕಿದ್ದಾರೆ, ಈ ಮೂಲಕ ಅವರಿಗೆ ಬರಬಹುದಾದ ಗಂಡಾಂತರ ಸ್ವಲ್ಪ ಮಟ್ಟಿಗೆ ಶಮನವಾಗಿದೆ’ ಎಂದಿದ್ದಾರೆ ಆ ದೇವಿ ಭಕ್ತೆ.