October 18, 2024

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ ನಿವೃತ್ತಿ ವೇತನ ನಿಯಮಗಳ ಕುರಿತು ಕರ್ನಾಟಕ ನಾಗರೀಕ ಸೇವಾ ನಿಯಮಗಳು- 1958 ರ ಭಾಗ-4 ರಲ್ಲಿ ಪ್ರಸ್ತಾಪಿಸಿರುವ ಕೆಲವು ಮಾಹಿತಿಗಳು ಇಲ್ಲಿದೆ..

ನಿವೃತ್ತಿಯ ಅವಶ್ಯಕತೆ

ಸಾಮಾನ್ಯ ಜನರಂತೆ ಸರ್ಕಾರಿ ನೌಕರರು ಕೂಡ ಶಕ್ತಿಯಿರುವ ವರೆಗೆ ದುಡಿಯುತ್ತಾರೆ.
ವಯಸ್ಸು ಆದಂತೆ ಕರ್ತವ್ಯ ದಕ್ಷತೆ ಕಡಿಮೆಯಾಗುತ್ತದೆ
ಆರಂಭದಲ್ಲಿ ಇದ್ದ ಹುರುಪು ಉತ್ಸಾಹ ಇರುವುದಿಲ್ಲ ಇದರಿಂದ ಸಾರ್ವಜನಿಕರ ಕೆಲಸಗಳು ವಿಳಂಬಿಸುತ್ತವೆ ಹೊಸತಲೆಮಾರಿಗೆ ಉದ್ಯೋಗದ ಅವಶ್ಯಕತೆ
ಅದಕ್ಕಾಗಿ ನಿವೃತ್ತಿ ಅನಿವಾರ್ಯವಾಗುತ್ತದೆ

ನಿವೃತ್ತಿ ವಯಸ್ಸು
* ಯಾವ ವಯಸ್ಸಿಗೆ ನಿವೃತ್ತಿಯಾಗಬೇಕು
* ನಿವೃತ್ತಿಯ ವಯಸ್ಸು ಆಯಾ ದೇಶಗಳ ವಾತವರಣವನ್ನು ಹಾಗೂ ಜೀವಿತಾವಧಿಯನ್ನು ಅವಲಂಬಿಸಿರುತ್ತದೆ
* ಯು ಎಸ್ ಎ ನಲ್ಲಿ ಜೀವಿತಾವಧಿ ವಯಸ್ಸು 65-70
* ಬ್ರಿಟನ್ ನಲ್ಲಿ ಜೀವಿತಾವಧಿ ವಯಸ್ಸು60-65
* ಭಾರತದಲ್ಲಿ ಜೀವಿತಾವಧಿ ವಯಸ್ಸು 55-60

ನಿವೃತ್ತಿ ಸೌಲಭ್ಯಗಳ ಸಿದ್ದಾಂತಗಳು
* ಪ್ರತಿಯೊಂದು ದೇಶದಲ್ಲೂ ಕೂಡ ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಅವರ ಇಳಿವಯಸ್ಸಿನಲ್ಲಿ ಪರಿಹಾರವಾಗಿ ಮಾಸಿಕ ಮೊಬಲಗು ಅಥವಾ ಹಿಡಿಗಂಟಾಗಿ ಹಣವನ್ನು ಪಾವತಿದಲಾಗುತ್ತಿದೆ
* ಇದಕ್ಕಾಗಿ ಅಯವ್ಯಯದಲ್ಲಿ ಸರ್ಕಾರ ಹಣವನ್ನು ಕಾಯ್ದಿರಿಸುತ್ತದೆ
* ಈ ರೀತಿಯ ಉಪಲಬ್ದಗಳು ಪಾವತಿಸದಿದ್ದರೆ ಏನಾಗುತ್ತಿತ್ತುನೌಕರನು ಸಾಯುವತನಕ ವಿರಾಮವಿಲ್ಲದೆ ದುಡಿಯಬೇಕಿತ್ತು ಆ ವಯಸ್ಸಾದ ನೌಕರರ ಸಂಖ್ಯೆ ಹೆಚ್ಚಳವಾಗಿ ಆಡಳಿತ ದುರ್ಬಲವಾಗುತ್ತಿದೆ

ನಿವೃತ್ತಿ ಸೌಲಭ್ಯಗಳ ಸಿದ್ದಾಂತಗಳು
* ಉಪಲಬ್ದಗಳಿಲ್ಲದೆ ನಿವೃತ್ತಿಗೊಳಿಸಿದರೆ ನೌಕರನು ನಿರ್ಗತಿಕನಾಗುತ್ತಿದ್ದ
* ನೌಕರನ ಜೀವನ ಕಷ್ಟಕರವಾಗುತಿತ್ತು
*ಯಾರೂ ಸರ್ಕಾರಿ ನೌಕರಿಯನ್ನು ಬಯಸುತ್ತಿರಲಿಲ್ಲ ಸರ್ಕಾರಿ ನೌಕರಿಗೆ ಘನತೆ ಇರುತ್ತಿರಲಿಲ್ಲ ನೌಕರರು ಹತಾಷರಾಗಿ ಲಂಚಕೋರರಾಗುತಿದ್ದರು
* ಸೇವೆಯಲ್ಲಿ ಇರುವ ತನಕ ದೋಚುತ್ತಿದ್ದರು

ನಿವೃತ್ತಿ ವೇತನ ಸೌಲಭ್ಯಗಳನ್ನು ಎರಡು ಭಾಗಗಳನ್ನಾಗಿ ಮಾಡಿದೆ
1.ನಿವೃತ್ತಿಯಾದಾಗ ದೊರೆಯುವ ಉಪಲಬ್ದಗಳು
2.ಸೇವೆಯಲ್ಲಿ ಮರಣ ಹೊಂದಿದಾಗ ದೊರೆಯುವ ಉಪಲಬ್ದಗಳು
ನಿವೃತ್ತಿಯಾದಾಗ ದೊರೆಯುವ ಉಪಲಬ್ದಗಳು:
1.ನಿವೃತ್ತಿ ವೇತನ2.
2.ಸೇವಾ ಉಪದಾನ
3.ಪರಿವರ್ತಿತ ಪಿಂಚಣಿ
4.ಸೇವಾಂತ್ಯದಲ್ಲಿ ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ[118 ಎ]
5.ಸಾಮೂಹಿಕ ವಿಮಾ ಯೋಜನೆ ಉಳಿತಾಯ ನಿಧಿ ಮೊತ್ತ
6.ಸಾಮಾನ್ಯ ಭವಿಷ್ಯ ನಿಧಿ ಮೊತ್ತ
7.ನಿವೃತ್ತಿ ಸ್ಥಳಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು[548ಎ]
2.ಸೇವೆಯಲ್ಲಿ ಮರಣ ಹೊಂದಿದಾಗ ದೊರೆಯುವ ಉಪಲಬ್ದಗಳು
1.ಕುಟುಂಬ ನಿವೃತ್ತಿ ವೇತನ
2.ಮರಣ ಉಪದಾನ
3.ಮರಣ ಹೊಂದಿದ ದಿನದಂದು ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ
5.ಸಾಮೂಹಿಕ ವಿಮಾ ಯೋಜನೆ ವಿಮಾನಿಧಿ & ಉಳಿತಾಯ ಮೊತ್ತ
6.ಸಾಮಾನ್ಯ ಭವಿಷ್ಯ ನಿಧಿ ಮೊತ್ತ
7.ಸ್ವಗ್ರಾಮಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು
ಸಾಮಾನ್ಯ ನಿವೃತ್ತಿ ವೇತನ ನಿಯಮಗಳು:
* ನಿವೃತ್ತಿ ವೇತನ ಎಂದರೆ ನಿವೃತ್ತಿ ವೇತನ ಹಾಗೂ ಸೇವಾ ಉಪದಾನ ಸೇರಿರುತ್ತದೆ.

Leave a Reply

Your email address will not be published. Required fields are marked *