November 19, 2024

ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಹಲ್ಲೆ ಮಾಡಿದ್ದು ಪೊಲೀಸ್‌ ಲಾಠಿಯಿಂದ ಎಂದು ತಿಳಿದುಬಂದಿದೆ. ಆ ಲಾಠಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರ್ಶನ್ ಬರ್ತಡೇ ದಿನ ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರು, ಮನೆಯ ಬಳಿ ಒಂದು ಲಾಠಿ ಬಿಟ್ಟು ಹೋಗಿದ್ದರಂತೆ. ಮನೆಯ ಸೆಕ್ಯೂರಿಟಿ ಗಾರ್ಡ್ ರೂಂನಲ್ಲಿ ಲಾಠಿಯನ್ನು ಮನೆಯವರು ಎತ್ತಿಟ್ಟಿದ್ದರಂತೆ. ನಟ ದರ್ಶನ್ ಅವರ ಆರ್‌ಆರ್‌ನಗರ ನಿವಾಸದ ಭದ್ರತಾ ಕೊಠಡಿಯಲ್ಲಿದ್ದ ಲಾಠಿಯಿಂದ ರೇಣುಕಾಸ್ವಾಮಿಗೆ ಥಳಿಸಲಾಗಿದೆ.

ಮನೆಯಲ್ಲಿದ್ದ ಲಾಠಿಯನ್ನ ವ್ಯಕ್ತಿಯೊಬ್ಬನಿಂದ ಶೆಡ್‌ಗೆ ನಟ ದರ್ಶನ್‌ ತರಿಸಿಕೊಂಡಿದ್ದರಂತೆ. ಅದೇ ಲಾಠಿ ಬಳಕೆ ಮಾಡಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದ್ದು, ಹಲ್ಲೆ ವೇಳೆ ಪೀಸ್ ಪೀಸ್ ಆಗಿದ್ದ ಲಾಠಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ, ಪಟ್ಟಣಗೆರೆ ಶೆಡ್‌ನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸ್ ಅಧಿಕಾರಿಗಳಿಗೆ, ದರ್ಶನ್ ಸುಮಾರು 50 ನಿಮಿಷಗಳ ಕಾಲ ಶೆಡ್‌ನಲ್ಲಿದ್ದರು ಎಂದು ತಿಳಿದು ಬಂದಿದೆ.

ರೇಣುಕಾಸ್ವಾಮಿ ಅವರು ಪವಿತ್ರಾ ಗೌಡ ಅವರಿಗೆ ಕಳುಹಿಸಿದ್ದ ಸಂದೇಶಗಳನ್ನು ಓದುವಂತೆ ನಟ ತನ್ನ ಸಹಚರ ಪವನ್‌ಗೆ ಹೇಳಿದ್ದ ಎನ್ನಲಾಗಿದೆ. ಪವನ್ ಸಂದೇಶಗಳನ್ನು ಜೋರಾಗಿ ಓದುತ್ತಿದ್ದಾಗ, ನಟ ಸಂತ್ರಸ್ತೆನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆರಂಭದಲ್ಲಿ ದರ್ಶನ್ ಅವರು ಶೆಡ್‌ನಲ್ಲಿ ಕೇವಲ ಎರಡು ನಿಮಿಷಗಳ ಕಾಲ ಇದ್ದೆ ಎಂದು ಪೊಲೀಸರಿಗೆ ತಿಳಿಸಿದ್ದರು ಮತ್ತು ರೇಣುಕಾಸ್ವಾಮಿಗೆ ಹಣ ನೀಡಿ, ತಮ್ಮ ಊರಿಗೆ ಹಿಂತಿರುಗುವಂತೆ ಮತ್ತು ಪವಿತ್ರಾಗೆ ಸಂದೇಶ ಕಳುಹಿಸಬೇಡಿ ಎಂದು ಕೇಳಿದ್ದಾಗಿ ತಿಳಿಸಿದ್ದರು. ನಕಲಿ ಇನ್‌ಸ್ಟಾಗ್ರಾಮ್ ಐಡಿ ಬಳಸಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಸುಮಾರು 200 ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

Leave a Reply

Your email address will not be published. Required fields are marked *