September 17, 2024

ನವದೆಹಲಿ:  ಪ್ಯಾರಾಸೆಟಮಾಲ್ಪ್ಯಾಂಟಾಪ್ರಜೋಲ್ಸೇರಿದಂತೆ ಕೆಲವು ಆ್ಯಂಟಿಬಯೊಟೆಕ್ಔಷಧಗಳು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಸುಮಾರು 52 ಔಷಧಗಳ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ರಾಷ್ಟ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ಹೇಳಿದೆ. ಇವುಗಳಲ್ಲಿ ಸುಮಾರು 22 ಔಷಧಿಗಳನ್ನು ಹಿಮಾಚಲ ಪ್ರದೇಶದಲ್ಲಿ ಉತ್ಪಾದಿಸಲಾಗಿದೆ ಎಂದು ಸಿಡಿಎಸ್ಸಿಒ ಮೇ 2024ರಲ್ಲಿ ನಡೆಸಿದ ಪರೀಕ್ಷೆಯನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿದೆ. ಜೈಪುರ, ಹೈದರಾಬಾದ್, ವಘೋಡಿಯಾ, ವಡೋದರಾ, ಆಂಧ್ರ ಪ್ರದೇಶ ಮತ್ತು ಇಂದೋರ್‌ನಂತಹ ಇತರ ಸ್ಥಳಗಳಿಂದ ಸಂಗ್ರಹಿಸಿದ ಔ‍ಷಧಗಳ ಮಾದರಿಯಲ್ಲೂ ಗುಣಮಟ್ಟದ ಕೊರತೆ ಕಂಡು ಬಂದಿದೆ. ಜೂನ್ 20 ರಂದು ಬಿಡುಗಡೆಯಾದ ಡ್ರಗ್ ಅಲರ್ಟ್ ಪ್ರಕಾರ, ಒಟ್ಟು 52 ಔಷಧ ಮಾದರಿಗಳು ಸಿಡಿಎಸ್‌ಸಿಒ ನಡೆಸಿದ ಗುಣಮಟ್ಟದ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿಲ್ಲ.

ಸಾಮಾನ್ಯ ಜ್ವರ, ಮೈಕೈ ನೋವಿಗೆ ಜನರು ಬಳಸುವ ಪ್ಯಾರಸಿಟಮಲ್ ಮಾತ್ರೆಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ. ಇದರಂತೆ ಜನರು ವೈದ್ಯರ ನಿರ್ದೇಶನಗಳಿಲ್ಲದೆ ಮೆಡಿಕಲ್‌ನಿಂದ ಪಡೆದು ಬಳಸುವ ಅನೇಕ ಔಷಧಿಗಳು ಕೂಡ ಗುಣಮಟ್ಟದಿಂದ ಕೂಡಿಲ್ಲ ಎಂಬುವುದು ತಿಳಿದು ಬಂದಿದೆ. ವೈದ್ಯಕೀಯ ಸಮುದಾಯ ಮತ್ತು ಜನರಿಗೆ ಬಗ್ಗೆ ಸಿಡಿಎಸ್‌ಸಿಒ ಎಚ್ಚರಿಕೆ ನೀಡಿದೆ. ಮಧ್ಯ ಪ್ರದೇಶದ ಉಜ್ಜಯಿನಿ ಮೂಲದ ಆಸ್ಕೋನ್ ಹೆಲ್ತ್‌ಕೇರ್‌ನಲ್ಲಿ ಕೆಳದರ್ಜೆಯ 500 ಎಂಜಿ ಪ್ಯಾರಸಿಟಮಲ್ ಮಾತ್ರೆಗಳನ್ನು ತಯಾರಿಸಲಾಗಿದೆ. ಆಸ್ಕೋನ್ ಹೆಲ್ತ್‌ಕೇರ್‌ನ ಅಧಿಕೃತ ವೆಬ್‌ಸೈಟ್ ಕಂಪನಿಯು ಅಂತಿಮ ಔಷಧೀಯ ಡೋಸೇಜ್ ಫಾರ್ಮ್‌ಗಳನ್ನು ತಯಾರಿಸುತ್ತದೆ ಎಂದು ಹೇಳುತ್ತದೆ.

ರೋಗ ಗ್ರಸ್ತವಾಗುವಿಕೆಗಳು ಮತ್ತು ಆತಂಕದ ಅಸ್ವಸ್ಥತೆಗಳಿಗೆ ಬಳಸುವ ಕ್ಲೋನಾಜೆಪಮ್ ಮಾತ್ರೆಗಳು, ನೋವು ನಿವಾರಕ ಡಿಕ್ಲೋಫೆನಾಕ್, ಆಂಟಿಹೈಪರ್ಟೆನ್ಷನ್ ಡ್ರಗ್ ಟೆಲ್ಮಿಸಾರ್ಟನ್, ಉಸಿರಾಟದ ಕಾಯಿಲೆಗಳಿಗೆ ಬಳಸುವ ಆಂಬ್ರೋಕ್ಸೋಲ್, ಆಂಟಿಫಂಗಲ್ ಫ್ಲುಕೋನಜೋಲ್ ಮತ್ತು ವಿವಿಧ ಮಲ್ಟಿವಿಟಮಿನ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳು ಕಳಪೆ ಗುಣಮಟ್ಟದ ಔಷಧಿಗಳ ಪಟ್ಟಿಯಲ್ಲಿ ಸೇರಿವೆ. ಹಿಮಾಚಲ ಪ್ರದೇಶದ ಜತೆಗೆ ರಾಜಸ್ಥಾನದ ಜೈಪುರ, ತೆಲಂಗಾಣದ ಹೈದರಾಬಾದ್‌, ಗುಜರಾತ್ ವಡೋದರ, ಮಧ್ಯಪ್ರದೇಶದ ಇಂದೋರ್ಸೇರಿದಂತೆ ಹಲವು ಪ್ರಮುಖ ನಗರಗಳಿಂದ ಔಷಧಗಳ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

Leave a Reply

Your email address will not be published. Required fields are marked *