ಬೆಂಗಳೂರು :ನಾಲ್ಕು ವರ್ಷಗಳ ಹಿಂದೆ ಬಿರುಗಾಳಿ ಎಬ್ಬಿಸಿದ್ದ ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳಿದ್ದ ಡ್ರಗ್ಸ್ ಕೇಸ್‌ನಲ್ಲಿ ನಟಿ ಸಂಜನಾ ಗಲ್ರಾನಿ, ಉದ್ಯಮಿ ಶಿವಪ್ರಕಾಶ್ ಮತ್ತು ಆದಿತ್ಯ ಅಗರವಾಲ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಇದರಿಂದಾಗಿ ಸಿಐಡಿ ಪೊಲೀಸರಿಗೆ ತೀವ್ರ ಹಿನ್ನಡೆಯಾಗಿದೆ.
ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಬಿರುಗಾಳಿ ಎಬ್ಬಿಸಿದ್ದ ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳಿದ್ದ ಡ್ರಗ್ಸ್ ಕೇಸ್‌ನಲ್ಲಿ ನಟಿ ಸಂಜನಾ ಗಲ್ರಾನಿ, ಉದ್ಯಮಿ ಶಿವಪ್ರಕಾಶ್ ಮತ್ತು ಆದಿತ್ಯ ಅಗರವಾಲ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಇದರಿಂದಾಗಿ ಸಿಐಡಿ ಪೊಲೀಸರಿಗೆ ತೀವ್ರ ಹಿನ್ನಡೆಯಾಗಿದೆ.
ಮೊದಲನೇ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, 14ನೇ ಆರೋಪಿ ಸಂಜನಾ ಗಲ್ರಾನಿ ಮತ್ತು 22ನೇ ಆರೋಪಿ ಆದಿತ್ಯ ಅಗರವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯ ಪೀಠ, ಕಳೆದ ಮಾ.25ಕ್ಕೆ ಈ ತೀರ್ಪು ನೀಡಿದೆ. ಆದರೆ, ಆದೇಶದ ಪ್ರತಿಯಧಿನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸದೆ ಇರುವುದೆ ಹಿನ್ನಡೆಗೆ ಕಾರಣ ಆಯ್ತಾ?
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ”2015, 2018 ಮತ್ತು 2019ರಲ್ಲಿ ನಡೆದಿದೆ ಎನ್ನಲಾದ ಮಾದಕ ದ್ರವ್ಯ ಸೇವನೆ ಸಂಬಂಧ ಅರ್ಜಿದಾರರ ವಿರುದ್ಧ 2020ರಲ್ಲಿ ಪ್ರಕರಣ ದಾಖಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 219(1) ಪ್ರಕಾರ ಅರ್ಜಿದಾರರ ವಿರುದ್ಧ ಹಿಂದೆ ಮಾಡಿರುವ ಆರೋಪಗಳಿಗೆ ಈಗ ವಿಚಾರಣೆ ನಡೆಸಲಾಗದು ಮತ್ತು ಹೈಕೋರ್ಟ್‌ನ ಹಿಂದಿನ ತೀರ್ಪು ಮತ್ತು ನಿಯಮದ ಪ್ರಕಾರ ಪೊಲೀಸರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಬೇಕಿತ್ತು. ಆದರೆ, ದಾಖಲಿಸಿಲ್ಲ. ಆದ್ದರಿಂದ ಆರೋಪಿಗಳ ವಿರುದ್ಧ ಪ್ರಕರಣ ಮುಂದುವರಿಸಿದರೆ ಅದು ಕಾನೂನು ದುರ್ಬಳಕೆಯಾಗಲಿದೆ,” ಎಂದು ಆದೇಶಿಸಿದೆ.