August 18, 2025
Screenshot 2024-06-25 171914

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ವಿಡಿಯೋ ಮಾಡಿ ವೈರಲ್​​ ಮಾಡಿರುವ ಆರೋಪದ ಮೇಲೆ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ , ಬಿಜೆಪಿ ನಾಯಕ ಪ್ರೀತಂ ಗೌಡ ಮತ್ತು ಇವರ ಆಪ್ತರಾದ ಕಿರಣ, ಶರತ್ ವಿರುದ್ಧ ಬೆಂಗಳೂರು ಸೈಬರ್​ ಕ್ರೈಂ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಈ ಪ್ರಕರಣ ಕೂಡ ಪ್ರಜ್ವಲ್ ರೇವಣ್ಣ ಅವರಿಗೆ ಸಾಕಷ್ಟು ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.

ಐಪಿಸಿ ಸೆಕ್ಷನ್​ 354(A) ಲೈಗಿಂಕ ಕಿರುಕುಳ, 354(D) ಮಹಿಳೆಯ ನಿರಾಸ್ತಕಿ ಹೊರತಾಗಿ ಎಲೆಕ್ಟ್ರಾನಿಕ್ ಸಂಹವನಗಳನ್ನು ಪದೇ ಪದೇ ಅನುಸರಿಸುವ ಮೇಲ್ವಿಚಾರಣೆ ಮಾಡುವ ಅಪರಾಧ, 354(B) ಮಹಿಳೆ ಮೇಲೆ ಆಕ್ರಮಣ ಮಾಡುವ ಕ್ರಿಮಿನಲ್ ಬಲವನ್ನು‌ ಬಳಸುವ ವಿವಸ್ತ್ರವಾಗಿರಲು ಒತ್ತಾಯಿಸುವುದು, 506 ಕ್ರಿಮಿನಲ್ ಬೆದರಿಕೆ ಮತ್ತು 66ಇ ಐಟಿ ಆ್ಯಕ್ಟ್​​ ಅಡಿಯಲ್ಲಿ ನಾಲ್ವರ ವಿರುದ್ಧ ಎಫ್​​ಐಆರ್​ ದಾಖಲಾಗಿದೆ.

Leave a Reply

Your email address will not be published. Required fields are marked *