November 19, 2024

ಚೆಕ್ ಮೊತ್ತಕ್ಕಿಂತ ದುಪ್ಪಟ್ಟು ದಂಡ ವಿಧಿಸುವ ಅಧಿಕಾರ ಹೊಂದಿಲ್ಲ ಎಂದಿರುವ ಹೈಕೋರ್ಟ್, ಈ ಸಂಬಂಧ ಸಲ್ಲಿಕೆಯಾದ ಅರ್ಜಿಯನ್ನು ಪುರಸ್ಕರಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೈಸೂರಿನ ಎ.ಎಂ.ಹರೀಶ್‌ಗೌಡ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲಕಾಲ ವಾದ-ಪ್ರತಿವಾದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ ದುಪ್ಪಟ್ಟು ದಂಡ ವಿಧಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ అధిಕಾರవిల్ల ఎందు ಸ್ಪಷ್ಟಪಡಿಸಿದೆ. ಅಲ್ಲದೆ ಪ್ರಕರಣದ ಕುರಿತು ಕೆ.ಆ‌ರ್. ನಗರದ ಜೆಎಂಎಫ್‌ಸಿ ನ್ಯಾಯಾಲಯ ನೀಡಿದ್ದ ಆದೇಶ ಮಾರ್ಪಡಿಸಿದೆ. ಜತೆಗೆ ಅರ್ಜಿದಾರರು ದೂರುದಾರನಿಗೆ 4.3 ಲಕ್ಷ ರೂ. ಪಾವತಿಸುವ ಬದಲಿಗೆ 3.25 ಲಕ್ಷ ರೂ. ಅನ್ನು ಜು.10ಕ್ಕೂ ಮೊದಲು ಪಾವತಿಸುವಂತೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.

Leave a Reply

Your email address will not be published. Required fields are marked *