August 19, 2025
Screenshot 2024-06-20 151018

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಂತೆ ನೆರೆ ಹೊರೆಯ ರಾಜ್ಯಗಳ ಮದ್ಯದ ಬೆಲೆಯನ್ನು ಪರಿಗಣಿಸಿ ದರ ಪರಿಷ್ಕರಿಸಲು ಅಬಕಾರಿ ಇಲಾಖೆಯು ಕರಡು ಅಧಿಸೂಚನೆ ಪ್ರಕಟಿಸಿದ್ದು, ಜು.1 ರಿಂದ ಪರಿಷ್ಕೃತ ದರ ಜಾರಿಯಾಗಲಿವೆ. ಇದರನ್ವಯ ಅಗ್ಗದ ಕೆಲ ಮದ್ಯಗಳು ದುಬಾರಿಯಾಗ ಲಿದ್ದರೆ, ದುಬಾರಿ ಮದ್ಯಗಳು ಸ್ವಲ್ಪ ಅಗ್ಗವಾಗಲಿವೆ.

ನೆರೆಯ ರಾಜ್ಯಗಳಲ್ಲಿ ಕಡಿಮೆ ಬೆಲೆಯ ಮದ್ಯಗಳ ಮೊದಲ ಕೆಲ ಸ್ಲ್ಯಾಬ್‌ಗಳ ದರ ಹೆಚ್ಚಳವಾಗಿದೆ. ಆದರೆ ಕರ್ನಾಟಕದಲ್ಲಿ ಬೆಲೆ ಕಡಿಮೆ ಇದೆ. ಇನ್ನು ದುಬಾರಿ ಮದ್ಯಗಳ ಬೆಲೆ ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಹೆಚ್ಚಾಗಿದೆ. ಆದ್ದರಿಂದ ನೆರೆ ರಾಜ್ಯಗಳ ಮದ್ಯದ ದರವನ್ನು ಪರಿಗಣಿಸಿ ‘ಸಮತೋಲನ’ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಇದೀಗ ಜು.1 ರಿಂದ ಪರಿಷ್ಕೃತ ದರಗಳು ಅನ್ವಯವಾಗಲಿವೆ.

Leave a Reply

Your email address will not be published. Required fields are marked *