ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಪೊಲೀಸರು ಒಟ್ಟು 9 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.. ಆರಂಭದಲ್ಲಿ 302, 201 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ತನಿಖೆ ವೇಳೆ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿರುವ ಪೊಲೀಸರು 9 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 201, 120-ಬಿ, 355, 384, 143,147,148, ರೆ/ವಿ 149 ಅಡಿಯಲ್ಲಿ ಪ್ರಕರಣಗಳನ್ನ ದಾಖಲಿಸಲಾಗಿದೆ ಎಂದು ರಿಮ್ಯಾಂಡ್ ಕಾಪಿಯಲ್ಲಿ ಪೊಲೀಸರು ತಿಳಿಸಿದ್ದಾರೆ.
ಸೆಕ್ಷನ್ 302 – ಕೊಲೆಗೆ ದಂಡನೆ
ಸೆಕ್ಷನ್ 201 – ಅಪರಾಧಿಯನ್ನು ರಕ್ಷಿಸುವುದಕ್ಕಾಗಿ ತಪ್ಪು ಮಾಹಿತಿ ಕೊಡುವುದು, ಸಾಕ್ಷ್ಯ ನಾಶ
ಸೆಕ್ಷನ್ 120(ಬಿ) – ಕೊಲೆ ಮಾಡಲು ಮಾಡಿಕೊಂಡ ಅಪರಾಧಿಕ ಒಳ ಸಂಚು. ಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಶಿಕ್ಷೆ ವಿಧಿಸಬೇಕು
ಸೆಕ್ಷನ್ 355 – ತೀವ್ರ ಉದ್ರೇಕದಿಂದಲ್ಲದೇ ವ್ಯಕ್ತಿಗೆ ಅವಮಾನ ಮಾಡಲು ಅವನ ಮೇಲೆ ಹಲ್ಲೆ, ಅಥವಾ ಅಪರಾಧಿಕ ಬಲಪ್ರಯೋಗ ಮಾಡುವುದು
ಸೆಕ್ಷನ್ 384 – ಬಲಾಗ್ದ್ರ ಹಣಕ್ಕಾಗಿ ದಂಡನೆ / ಸುಲಿಗೆ
ಸೆಕ್ಷನ್ 143 – ಕಾನೂನು ಬಾಹಿರ ಕೃತ್ಯ ಎಸಗಿದವರಿಗೆ 6 ತಿಂಗಳ ವರೆಗೆ ಜೈಲು ಅಥವಾ ಸಮಾನಾಂತರ ದಂಡ ವಿಧಿಸಬಹುದಾದ ದಂಡನೆ
ಸೆಕ್ಷನ್ 147 – ದೊಂಬಿ ಗಲಾಟೆ ಮಾಡಿದರೆ ದಂಡನೆ
ಸೆಕ್ಷನ್ 148 – ಮಾರಕ ಆಯುಧಗಳನ್ನು ಬಳಸಿ ದೊಂಬಿ ಮಾಡುವುದು
ಸೆಕ್ಷನ್ 149 – ಒಂದೇ ಉದ್ದೇಶ ಈಡೇರಿಸಲು ಮಾಡಲಾದ ಅಪರಾಧಗಳ ಬಗ್ಗೆ ವಿಧಿಸಿರುವ ಕೂಟದ ಪ್ರತಿಯೊಬ್ಬ ಸದಸ್ಯನೂ ತಪ್ಪಿತಸ್ಥನಾಗುವುದು / ಕೃತ್ಯಕ್ಕೆ ಒಳ ಸಂಚು ವಿಧಿಸಲಾಗಿದೆ.