
ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಹಿನ್ನಲೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಕ್ರೀಡಾ-ಯುವಜನ ಇಲಾಖೆಯ ಸಭೆ ನಡೆಯಲಿದೆ. ಇನ್ನು ಸಿಎಂ ಬಳಿಯೇ ಎರಡು ಇಲಾಖೆಗಳಿದ್ದು, ಅಧಿಕಾರಿಗಳ ಸಭೆ ನಡೆಸಿ ಬಳಿಕ ಸಿಎಂ ಸೂಚನೆ ನೀಡಲಿದ್ದಾರೆ. ಅಲ್ಲದೇ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ ಕೇಳಿ ಬಂದಿದ್ದು, ಇಲಾಖೆಯ ಎಲ್ಲಾ ನಿಗಮದ ಮುಖ್ಯಸ್ಥರಿಗೂ ಸಿಎಂ ಖಡಕ್ ಸೂಚನೆ ನೀಡಲಿದ್ದಾರೆ.