ಚಿಕ್ಕೋಡಿ: ಜನರು ಕಷ್ಟದಲ್ಲಿರುವಾಗ ಬೆಲೆ ಏರಿಕೆ ಮಾಡಬಾರದಿತ್ತು. ಸರ್ಕಾರ ಈ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಜನರು ಕಷ್ಟದಲ್ಲಿರುವಾಗ ಬೆಲೆ ಏರಿಕೆ ಮಾಡಬಾರದಿತ್ತು. ಸರ್ಕಾರ ಈ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು, ಸರ್ಕಾರ ಒಂದು ಕೈಯಿಂದ ಕೊಡುವುದು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುವುದನ್ನು ಮಾಡುತ್ತಿದೆ. ಸಾಮಾನ್ಯಜನರ ಮೇಲೆ ಆರ್ಥಿಕ ಹೊರೆ ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಇನ್ನೂ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಎರಡು ರಾಷ್ಟ್ರೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಅಥಣಿ ಬಗ್ಗೆ ತಿಳಿದುಕೊಳ್ಳಬೇಕು. ಕೆಲವರು ನಾವು ಆಡಿದ್ದೇ ಆಟ ಎಂದು ತಿಳಿದುಕೊಂಡಿದ್ದಾರೆ. 2004 ರಲ್ಲಿ ಶಹಜಾನ್ ಡೊಂಗರಗಾಂವ್ ಸೋಲಿಸಬೇಕು ಎಂದು ಪಕ್ಷ ತೊರೆದು ಶಾಸಕ ಸ್ಥಾನಕ್ಕೆ ಆಯ್ಕೆಯಾದರು. ಮಹೇಶ್ ಕುಮಟಳ್ಳಿ ಅಥಣಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಕೆಟ್ಟ ವಾತಾವರಣದಲ್ಲಿ ಪಕ್ಷ ತೊರೆದು ಶಾಸಕರಾದರು. ಅಥಣಿ ಜನರು ಬುದ್ಧಿವಂತರಿದ್ದಾರೆ, ಮುಂದಿನ ದಿನಗಳಲ್ಲಿ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.