
ಹುಬ್ಬಳ್ಳಿಯ ಮೂವರಲ್ಲಿ ಇಬ್ಬರಿಗೆ ಮಂತ್ರಿಗಿರಿ,ಮಾಜಿ ಸಿಎಂಗೆ ಮುಂದುವರೆದ ನಿರಾಸೆ?
ಹುಬ್ಬಳ್ಳಿ:ಮಿತ್ರ ಪಕ್ಷಗಳ ಸಹಕಾರದಿಂದ ಮತ್ತೆ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಇಂದು ಅಧಿಕಾರ ಪದಗ್ರಹಣ ಮಾಡಲಿದ್ದಾರೆ.ಸಾದ್ಯ ಅವರ ಮಂತ್ರಿ ಮಂಡಲದ ಮೇಲೆ ಎಲ್ಲರ ಕಣ್ಣಿದ್ದು ಯಾರ್ಯಾರು ಮಂತ್ರಿಗಿರಿ ಪಡೆಯುತ್ತಾರೆ ಎನ್ನುವ ಕುತೂಹಲ ಇದೆ.
ಸದ್ಯ ಹುಬ್ಬಳ್ಳಿ ಮೂಲದ ಪ್ರಲ್ಹಾದ ಜೋಷಿ ಧಾರವಾಡ ಕ್ಷೇತ್ರದಿಂದ,ಬಸವರಾಜ್ ಬೊಮ್ಮಾಯಿ ಹಾವೇರಿ ಕ್ಷೇತ್ರದಿಂದ ಹಾಗು ಜಗದೀಶ್ ಶೆಟ್ಟರ್ ಬೆಳಗಾವಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದಾರೆ.ಇದರಲ್ಲಿ ಇಬ್ಬರಿಗೆ ಇಂದು ಮಂತ್ರಿಗಿರಿ ಪಿಕ್ಸ್ ಎನ್ನಲಾಗುತ್ತಿದ್ದು,ಮಾಜಿ ಸಿಎಂ ಬೊಮ್ಮಾಯಿಗೆ ಲಿಂಗಾಯತ ಕೋಟಾದಲ್ಲಿ ಹಾಗು ಹಾಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಬ್ರಾಹ್ಮಣ ಕೋಟಾದಲ್ಲಿ ಮಂತ್ರಿಗಿರಿ ದೊರೆಯುವ ಸಾಧ್ಯತೆ ಇದ್ದು,ಬೆಳಗಾವಿ ಲೋಕಸಭಾ ಸದಸ್ಯ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಸದ್ಯಕ್ಕೆ ಮಂತ್ರಿಗಿರಿ ದೊರೆಯುವ ಯಾವುದೇ ಅವಕಾಶ ಇಲ್ಲಾ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.