ದೆಹಲಿ: ಸದ್ಯ ಚುನಾವಣೆ ನಡೆಯಲಿರುವ ಏಳು ವಿಧಾನ ಪರಿಷತ್ ಸ್ಥಾನಗಳಲ್ಲಿ ಮುಸ್ಲಿಂ ಕೋಟಾದಲ್ಲಿ ತಮ್ಮ ಹೆಸರನ್ನು ಅಂತಿಮ ಘಟ್ಟಕ್ಕೆ ಕೊಂಡೊಯ್ದಿರುವ ಧಾರವಾಡ ಅಂಜುಮನ್ ಸಂಸ್ಥೆಯ ಇಸ್ಮಾಯಿಲ್ ತಮಟಗಾರ ಆತ್ಮೀಯರೊಂದಿಗೆ ದೆಹಲಿಯ ಪ್ರಸಿದ್ಧ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿ ದೇವರ ಮೋರೆ ಹೋಗಿದ್ದಾರೆ.
ಪರಿಷತ್ ಆಯ್ಕೆಯ ಹಣಾಹಣಿ ಇರುವಾಗಲೇ ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ಆಪ್ತ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆಪ್ತ ಶಹಜಮನ ಮುಜಾಹಿದ್, ಅನಿರುದ್ಧ ಚಿಂಚೊರೆ,ಅವರೊಂದಿಗೆ ದೆಹಲಿಗೆ ತೆರಳಿರುವ ಇಸ್ಮಾಯಿಲ್ ತಮಾಟಗಾರ ಅಂತಿಮ ಹಂತದಲ್ಲಿ ತಮ್ಮ ಹೆಸರು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಯಾವ ಕ್ಷಣದಲ್ಲಿ ಆದರೂ ಕಾಂಗ್ರೆಸ್ ಪಟ್ಟಿ ಬಿಡುಗಡೆಗೊಳ್ಳುವ ಸಾದ್ಯತೆ ಇದ್ದು,ಸ್ಥಳೀಯ ಮುಖಂಡರಾದ ಅಲ್ತಾಫ್ ಹಳ್ಳೂರ,ಅನಿಲ್ ಕುಮಾರ್ ಪಾಟೀಲ್ ಸೇರಿದಂತೆ ಅನೇಕರನ್ನು ಹೈ ಕಮಾಂಡ್ ಪರಿಗಣಿಸಿಲ್ಲ.ಸಚಿವ ಜಮೀರ್ ಅಹ್ಮದ್ ಅವರ ಒತ್ತಡ ಹಾಗು ಅಲ್ಪ ಸಂಖ್ಯಾತ ಸಮುದಾಯಕ್ಕೆ ಸ್ಥಳೀಯವಾಗಿ ಬೆನ್ನೆಲುಬು ಆಗಿ ನಿಲ್ಲುತ್ತಾ ರಾಜಕೀಯ ಜೀವನದಲ್ಲಿ ಏಳು ಬೀಳು ಸಾಧಿಸಿದ್ದರ ಫಲವಾಗಿ ಇಂದು ಕಾಂಗ್ರೆಸ್ ಪಕ್ಷ ಇವರನ್ನು ಗುರುತಿಸಿದೆ ಎಂದು ತಿಳಿದುಬಂದಿದೆ.