July 8, 2025
IMG_20240601_133924

ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ ಕ್ಷಮಿಸಲಾರದಂತಹ ಅಪರಾಧ ಮಾಡಿದ್ದಾರೆ. ಹೀಗಾಗಿ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣನನ್ನು ಎಸ್‌ಐಟಿ ಕಷ್ಟಡಿಗೆ ಕೊಟ್ಟಿದ್ದಾರೆ. ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು. ಇದೊಂದು ಗಂಭೀರ ಪ್ರಕರಣ. ಭಾರತದಂತಹ ದೇಶದಲ್ಲಿ ಮಹಿಳೆಯರನ್ನು ನಾವು ಗೌರವದಿಂದ ಕಾಣುತ್ತೇವೆ. ಈ ರೀತಿಯ ಘಟನೆ ನಡೆದಿರುವುದು ಹೇಸಿಗೆ ಹುಟ್ಟಿಸುವಂತಾಗಿದೆ ಮನಸ್ಸಿಗೆ ಕಿರಿಕಿರಿ ಆಗುತ್ತಿದೆ. ತ್ವರಿತ ಗತಿಯಲ್ಲಿ ತನಿಖೆ ಮುಗಿಸಿ ಗರಿಷ್ಠ ಶಿಕ್ಷೆ ಕೊಡುವಂತಾಗಬೇಕು ಎಂದರು.

ಪ್ರಜ್ವಲ್ ರೇವಣ್ಣ ರಾಜ್ಯದ ಕ್ಷಮೆ ಕೇಳಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆರೋಪಿ ಸ್ಥಾನದಲ್ಲಿದ್ದವರು ಕ್ಷಮೆ ಕೇಳಿದ ಕೂಡಲೇ ಬಿಟ್ಟುಬಿಡೋಕೆ ಆಗುತ್ತದೆಯೇ..? ಯಾಕೆ ಕ್ಷಮೆ ಕೇಳಿದರು ಅಂತ ಪ್ರಜ್ವಲ್ ಉತ್ತರ ಕೊಡಲಿ .

ಅವರು ಕ್ಷಮೆ ಕೇಳುವುದಿದ್ದರೆ ಸಂತ್ರಸ್ಥರ ಕ್ಷಮೆ ಕೇಳಲಿ. ಪ್ರಜ್ವಲ್‌ಗೆ ಆಗುವ ಶಿಕ್ಷೆ ಆಗಲೇಬೇಕು. ಪೆನ್ ಡ್ರೈವ್ ಹಂಚಿಕೆ ಇತ್ಯಾದಿಗಳನ್ನು ನೋಡಿದಾಗ ಪ್ರಜ್ವಲ್ ಕ್ಷಮೆಗೆ ಅರ್ಹರಲ್ಲ ಎಂದರು.

Leave a Reply

Your email address will not be published. Required fields are marked *