January 13, 2026
HBL_NEHA

ಹುಬ್ಬಳ್ಳಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದಷ್ಟೇ ಅಲ್ಲದೇ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಇದರ ಬೆನ್ನಲ್ಲೇ ಅಂಜಲಿ‌ ಕೊಲೆಯೂ ಆಗಿದ್ದರಿಂದ ಅಂಜಲಿ ಕೊಲೆ ಹಿಂದೆ ವಿಜಯ್ ಅಲಿಯಾಸ್ ಈರಣ್ಣ ಕೈವಾಡ ಇದೆ ಎಂದು ದಲಿತ ಸಂಘಟನೆಗಳು ಸಿಐಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು.. ಅಂಜಲಿ ಕೊಲೆ ಕೇಸ್ ನಲ್ಲಿ ಕೆಲ ದಲಿತ ಸಂಘಟನೆಗಳು ಸಮರ್ಪಕ ತನಿಖೆ ನಡೆಯಬೇಕೆಂದು ಮನವಿ ಮಾಡಿದ್ದರು. ‌ದಲಿತ ಸಂಘಟನೆಗಳ ಮನವಿ ಬೆನ್ನಲ್ಲೆ ಇದೀಗ ಬೇಡ ಜಂಗಮ‌ ಸರ್ಟಿಫಿಕೇಟ್ ಪಡೆದುಕೊಂಡಿರೋ ನೇಹಾ ಹಿರೇಮಠ ಜಾತಿ ಸರ್ಟಿಫಿಕೇಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಹೌದು…. ಬೇಗೂರ ರೋಡ ಹೊಂಗಸಂದ್ರ ವಾರ್ಡ್ ನಂಬರ್ 135 ರಲ್ಲಿ ಬೇಡ ಜಂಗಮ ಸರ್ಟಿಫಿಕೇಟ್ ಪಡೆದುಕೊಂಡಿರುವ ನೇಹಾ ಹಿರೇಮಠ ಜಾತಿ ಪ್ರಮಾಣ ಪತ್ರ ಮುನ್ನೆಲೆಗೆ ಬಂದಿದೆ. ನೇಹಾ ಜಾತಿ ಸರ್ಟಿಫಿಕೇಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂಜಲಿ ಕೊಲೆ‌ ಪ್ರಕರಣದಲ್ಲಿ ಮುಜುಗರವಾಗುತ್ತಲೇ ಮಗಳ ಜಾತಿ ಸರ್ಟಿಫಿಕೇಟ್ ವೈರಲ್ ಮಾಡಿದ್ರಾ ನಿರಂಜನ ಹಿರೇಮಠ..? ಎಂಬ ಪ್ರಶ್ನೆಗಳು ಈಗ ಉದ್ಭವವಾಗುತ್ತಿವೆ.‌

Leave a Reply

Your email address will not be published. Required fields are marked *