July 19, 2025
n613208776171714563797867d7558b71ec43afb3353f9c4dcc282bd74935e8883d986b258d5b7052e880c8

ಬೆಂಗಳೂರು: ಅತ್ತ ಪ್ರಜ್ವಲ್ ರೇವಣ್ಣ ಬಂಧನವಾಗಿ ರೇವಣ್ಣ ಕುಟುಂಬ ಒದ್ದಾಡುತ್ತಿದ್ದರೆ ಇತ್ತ ಎಚ್ ಡಿ ಕುಮಾರಸ್ವಾಮಿ ಮತ್ತು ಕುಟುಂಬ ರೆಸಾರ್ಟ್ ನಲ್ಲಿ ರಿಲ್ಯಾಕ್ಸ್ ಆಗುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಮೊದಲಿನಿಂದಲೂ ಪ್ರಜ್ವಲ್ ಪ್ರಕರಣದಲ್ಲಿ ಅಂತರ ಕಾಯ್ದುಕೊಳ್ಳುತ್ತಲೇ ಬಂದಿದ್ದರು. ಅವರ ಕುಟುಂಬಕ್ಕೂ ನಮಗೂ ಸಂಬಂಧವಿಲ್ಲ ಎಂದು ಕುಮಾರಸ್ವಾಮಿ ಈ ಮೊದಲೇ ಹೇಳಿದ್ದರು.

ಆದರೆ ಎಚ್ ಡಿ ರೇವಣ್ಣ ಪರವಾಗಿ ಸಹೋದರನಾಗಿ ಅಲ್ಲ, ಜೆಡಿಎಸ್ ಪಕ್ಷದ ನಾಯಕನಾಗಿ ಹೋರಾಡುವುದಾಗಿ ಹೇಳಿದ್ದರು. ಇದೀಗ ಅದರಂತೆಯೇ ನಡೆದುಕೊಂಡಿದ್ದಾರೆ. ಇತ್ತ ಪ್ರಜ್ವಲ್ ಬಂಧನದ ಜೊತೆಗೆ ಭವಾನಿ ರೇವಣ್ಣಗೂ ಬಂಧನ ಭೀತಿಯಿದೆ.

ಆದರೆ ಈ ಬಗ್ಗೆ ಅಂತರ ಕಾಯ್ದುಕೊಂಡಿರುವ ಎಚ್ ಡಿಕೆ ಕುಟುಂಬ ಈಗ ಕೇರಳದ ವಯನಾಡಿನ ರೆಸಾರ್ಟ್ ಒಂದರಲ್ಲಿ ಕಾಲ ಕಳೆಯುತ್ತಿದೆ. ಪತ್ನಿ ಅನಿತಾ, ಪುತ್ರ ನಿಖಿಲ್, ಸೊಸೆ ರೇವತಿ ಮತ್ತು ಮೊಮ್ಮಗನ ಜೊತೆ ಬೋಟಿಂಗ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *