July 11, 2025
n61220716817168641163393efee4a4f78c4d14b074d3b1dbb8d4ee9b08aa85440d729f7fc85dc030b8f5fd

ರಾಯಚೂರು: ಎಲೆಕ್ಟ್ರಿಕ್ ಬೈಕ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮೂರು ಅಂತಸ್ಥಿನ ಕಟ್ಟಡ ಹೊತ್ತಿ ಉರಿದ ಘಟನೆ ರಾಯಚೂರಿನ ಮಹಾವೀರ್ ಚೌಕ ಬಳಿ ನಡೆದಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ. ಆರ್.ಕೆ.ಭಂಡಾರಿ ಎಂಬುವವರ ಎಲೆಕ್ಟ್ರಿಕ್ ಬೈಕ್ ಅಂಗಡಿಯಲ್ಲಿ ಬೆಂಕಿ ಸಂಭವಿಸಿದೆ.
ಹಲವು ಬೈಕ್ ಗಳು ಬೆಂಕಿಗಾಹುತಿಯಾಗಿವೆ. ಒಂದೇ ಕಟ್ಟಡದಲ್ಲಿ ಬಟ್ಟೆ ಅಂಗಡಿಯೂ ಇತ್ತು. ಬೆಂಕಿಯ ಕೆನ್ನಾಲಿಗೆ ಮೂರು ಅಂತಸ್ತಿನ ಕಟ್ಟಡವನ್ನು ವ್ಯಾಪಿಸಿದ್ದು, ಕಟ್ಟಡ ಸಂಪೂರ್ಣ ಸುಟ್ಟು ಕರಕಲಾಗಿದೆ.

ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

Leave a Reply

Your email address will not be published. Required fields are marked *