
ಹುಬ್ಬಳ್ಳಿ: ಅಂಜಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಸ್ಟ್ ಮೇಲೆ ಟ್ವೀಸ್ಟ್ ಸಿಗುತ್ತಿದ್ದು ಇದೀಗ ಸಿಐಡಿ ಅಧಿಕಾರಿಗಳು ನೇಹಾ ಹಿರೇಮಠ ತಂದೆ ನಿರಂಜನಯ್ಯ ಹಿರೇಮಠ ರನ್ನು ವಿಚಾರಣೆಗೆಂದು ಹುಬ್ಬಳ್ಳಿಯ ಪ್ರವಾಸಿ ಮಂದಿರಕ್ಕೆ ಕರೆಸಿದ್ದಾರೆ.
ಕೊಲೆಯಾದ ಅಂಜಲಿ ಕಾರ್ಪೊರೇಟರ್ ನಿರಂಜನಯ್ಯ ಹಿರೇಮಠ್ ಅವರು ಪ್ರತಿನಿಧಿಸುವ ವಾರ್ಡ್ 68 ರಲ್ಲಿಯೇ ಬಾಡಿಗೆ ಮನೆಯಲ್ಲಿ ತನ್ನ ಅಜ್ಜಿ ಹಾಗೂ ತಂಗಿಯರ ಜೊತೆ ವಾಸವಿದ್ದಳು.ಹೀಗಾಗಿ ಅಂಜಲಿ ಕೊಲೆಯಾದ ನಂತರ ನಿರಂಜನಯ್ಯ ಹಿರೇಮಠ್ ಅಂಜಲಿ ಕುಟುಂಬದವರ ಬೆನ್ನಿಗೆ ನಿಂತಿದ್ರು.
ಆದ್ರೆ ಇದೆಲ್ಲದರ ನಡುವೆ ಇಂದು ಸಾಯಂಕಾಲ 6.30 ಕ್ಕೇ ಸಿಐಡಿ ಅಧಿಕಾರಿಗಳು ನಿರಂಜನಯ್ಯ ಹಿರೇಮಠ ಅವರನ್ನು ವಿಚಾರಣೆಗೆ ಕರೆಸಿದ್ದು ಬಾರಿ ಕುತೂಹಲ ಮೂಡಿಸಿದೆ.