January 13, 2026
before-you-file-a-complaint

ಹುಬ್ಬಳ್ಳಿ: ವ್ಯಕ್ತಿಯೋರ್ವ ಹೆಗ್ಗಣಗಳ‌ ಮೇಲೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ ವಿಚಿತ್ರ ಘಟನೆ ಹಳೆಹುಬ್ಬಳ್ಳಿಯ ಆನಂದ ನಗರದಲ್ಲಿ ನಡೆದಿದೆ.

ಹೌದು….. ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ನಿವಾಸಿ ಅನಿಲ ಮುಂಡರಗಿ ಎಂಬಾತನೇ ಹೆಗ್ಗಣಗಳ ಮೇಲೆ ದೂರು ನೀಡಿರುವಾತ… ಪಕ್ಕದ ಮನೆಯ ಹೆಗ್ಗಣಗಳು ಅನಿಲನ ಮನೆಗೆ ಬಂದು ಸಿಲೆಂಡರ್ ಪೈಪ್ ಗಳನ್ನು ಹಾಳು ಮಾಡುತ್ತಿವೆ.ಅಷ್ಟೇ ಅಲ್ಲದೇ ಸಿಂಕ್ ಪೈಪ್ ಗಳನ್ನೂ ಸಹ ಹಾಳು ಮಾಡುತ್ತಿವೆ. ಇದರಿಂದ ನಮಗೆ ತೊಂದರೆ ಉಂಟಾಗುತ್ತಿದೆ.

ಈ ಕುರಿತು ಮನೆ ಮಾಲೀಕರಿಗೆ ಸಾಕಷ್ಟು ಬಾರಿ ಹೇಳಿದ್ದರೂ ಸಹ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ. ಹೀಗಾಗಿ ಪೊಲೀಸರೇ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *