October 16, 2025
n6115301421716602152162d05f836fa601a0ceeb4da7ba3cce65dae2d280caff01101b121ea894d1ddc26d

ಧಾರವಾಡ: ಮಳೆ ಸುರಿಯುವಾಗ ಛತ್ರಿ ಹಿಡಿದು ಬಸ್ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಇದೀಗ ವಾಯವ್ಯ ಕರ್ನಾಟಕ ಸಾರಿಗೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಚಾಲಕ ಹನುಮಂತಪ್ಪ ಅ. ಕಿಲ್ಲೇದಾರ ಅವರನ್ನು ಮತ್ತು ನಿರ್ವಾಹಕಿ ಅನಿತಾ ಎಚ್‌.ಬಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಎನ್‌ಡಬ್ಲ್ಯುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ ತಿಳಿಸಿದ್ದಾರೆ.

ಒಂದು ಕೈಯಲ್ಲಿ ಛತ್ರಿ ಹಿಡಿದು ಮತ್ತೊಂದು ಕೈಯಲ್ಲಿ ಸ್ಟೀರಿಂಗ್‌ ಹಿಡಿದು, ವಾಯವ್ಯ ಕರ್ನಾಟಕ ಸಾರಿಗೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಚಾಲಕ ಹನುಮಂತಪ್ಪ ಅ. ಕಿಲ್ಲೇದಾರ ಅವರು ಬಸ್‌ ಚಾಲನೆ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.ಗುರುವಾರ ಮಧ್ಯಾಹ್ನ 4.30ರ ವೇಳೆಯಲ್ಲಿ ಮಳೆ ಸುರಿಯುವಾಗ ವಿಡಿಯೊ ಮಾಡಿದ್ದಾರೆ. ಉಪ್ಪಿನಬೆಟಗೇರಿಯಿಂದ ಧಾರವಾಡ ಕಡೆಗೆ ಬಸ್‌ ಸಂಚರಿಸುವಾಗ ಚಾಲಕ ಕೈಯಲ್ಲಿ ಕೊಡೆ ಹಿಡಿದು ಚಾಲನೆ ಮಾಡಿದ್ಧಾರೆ.
ಬಸ್‌ನಲ್ಲಿ ಪ್ರಯಾಣಿಕರು ಇರಲಿಲ್ಲ. ನಿರ್ವಾಹಕಿ ಅನಿತಾ ಎಚ್‌.ಬಿ.ಅವರು ಮೊಬೈಲ್‌ ಫೋನ್‌ ವಿಡಿಯೊ ಮಾಡಿದ್ಧಾರೆ. ಮನರಂಜನೆಗಾಗಿ ಮಳೆ ಸುರಿಯುವಾಗ ಛತ್ರಿ ಹಿಡಿದು ಬಸ್‌ ಚಾಲನೆ ಮಾಡಿದೆ ಎಂದು ಚಾಲಕ ವಿವರಣೆ ನೀಡಿದ್ದಾರೆ’ ಎಂದು ಎನ್‌ಡಬ್ಲ್ಯುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಪ್ರಯಾಂಗಾ ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *