October 15, 2025
jds-files-complaint-over-rahul-gandhi1-1716366605

ನವದೆಹಲಿ: ಪ್ರತಿಪಕ್ಷ ಮೈತ್ರಿಕೂಟ ಇಂಡಿಯಾ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆಯನ್ನ ರದ್ದುಗೊಳಿಸಿ ಕಸದ ಬುಟ್ಟಿಗೆ ಎಸೆಯಲಾಗುವುದು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಗಾಗಿ ಹರಿಯಾಣದಲ್ಲಿ ನಡೆದ ತಮ್ಮ ಮೊದಲ ಚುನಾವಣಾ ಸಭೆಯಲ್ಲಿ, ಮಾಜಿ ಕಾಂಗ್ರೆಸ್ ಅಧ್ಯಕ್ಷರು ರೈತರ ವಿಷಯದ ಬಗ್ಗೆ ಪ್ರಧಾನಿ ಮೋದಿಯವರ ಮೇಲೆ ದಾಳಿ ನಡೆಸಿದರು.
ಅಗ್ನಿವೀರ್ ಯೋಜನೆ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಇದು ಮೋದಿಯವರ ಯೋಜನೆಯೇ ಹೊರತು ಸೇನೆಯ ಯೋಜನೆಯಲ್ಲ. ಸೇನೆಗೆ ಅದು ಬೇಕಿಲ್ಲ” ಎಂದರು.

ಮಹೇಂದ್ರಗಢ-ಭಿವಾನಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, “ನಮ್ಮ ಸರ್ಕಾರ ರಚಿಸಿದಾಗ, ನಾವು ಅಗ್ನಿವೀರ್ ಯೋಜನೆಯನ್ನ ಕಸದ ಬುಟ್ಟಿಗೆ ಎಸೆಯುತ್ತೇವೆ” ಎಂದು ಹೇಳಿದರು.

ಭಾರತದ ಗಡಿಗಳನ್ನ ದೇಶದ ಯುವಕರು ಭದ್ರಪಡಿಸಿದ್ದಾರೆ ಮತ್ತು “ನಮ್ಮ ಯುವಕರ ಡಿಎನ್‌ಎಯಲ್ಲಿ ದೇಶಭಕ್ತಿ ಇದೆ” ಎಂದು ಅವರು ಹೇಳಿದರು.

ಬಿಜೆಪಿ ಸರ್ಕಾರದ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ ಅವರು, “ಅವರು ಎರಡು ರೀತಿಯ ಹುತಾತ್ಮರು ಇರುತ್ತಾರೆ ಎಂದು ಹೇಳುತ್ತಾರೆ – ಒಬ್ಬ ಸಾಮಾನ್ಯ ಜವಾನ ಮತ್ತು ಒಬ್ಬ ಅಧಿಕಾರಿ, ಅವರು ಪಿಂಚಣಿ, ಹುತಾತ್ಮ ಸ್ಥಾನಮಾನ, ಎಲ್ಲಾ ಸೌಲಭ್ಯಗಳನ್ನ ಪಡೆಯುತ್ತಾರೆ ಮತ್ತು ಮತ್ತೊಂದೆಡೆ, ಅಗ್ನಿವೀರ್ ಎಂಬ ಬಡ ಕುಟುಂಬದ ವ್ಯಕ್ತಿ. ಅಗ್ನಿವೀರರಿಗೆ ಹುತಾತ್ಮರ ಸ್ಥಾನಮಾನವೂ ಸಿಗುವುದಿಲ್ಲ, ಪಿಂಚಣಿಯೂ ಸಿಗುವುದಿಲ್ಲ, ಕ್ಯಾಂಟೀನ್ ಸೌಲಭ್ಯವೂ ಸಿಗುವುದಿಲ್ಲ” ಎಂದರು.

Leave a Reply

Your email address will not be published. Required fields are marked *