ಬೆಂಗಳೂರು: ತಾನು ಬಾಡಿಗೆಗೆ ಉಳಿದುಕೊಂಡಿದ್ದ ಓನರ್ ಮನೆಯಲ್ಲಿಯೇ ಕಳ್ಳತನ ಮಾಡಿದ ಖದೀಮ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಹೌದು, ನಾರಾಯಣಪುರ ನಗರದ ಮನೆಯೊಂದರಲ್ಲಿ ವಾಸವಿದ್ದ ಆಟೋ ಚಾಲಕ ಸೆಲ್ವರಾಜ್ ಎಂಬಾತ, ತನ್ನ ಕೈಚಳಕ ತೋರಿಸಿದ್ದು, ಮನೆಯ ಓನರ್ ತಮಿಳುನಾಡಿಗೆ ಹೋದಾಗ, ನಕಲಿ ಕೀ ಬಳಸಿ ಮನೆಯಲ್ಲಿನ ಹಣ-ಚಿನ್ನ ದೋಚಿದ್ದಾನೆ.
ಮೇ.7ರಂದು ಮನೆಯ ವೃದ್ಧೆ ಓನರ್ ತಮಿಳುನಾಡಿನ ಮಳೈನೂರ್ ದೇವಸ್ಥಾನಕ್ಕೆ ಹೋಗಿದ್ದಾಗ, ಆಸಾಮಿ ಕಳವು ಮಾಡಿದ್ದಾನೆ. ವೃದ್ಧೆ ಮೇ.15ರಂದು ವಾಪಸ್ ಆದಾಗ ಮನೆಯ ಬೀರುವಿನಲ್ಲಿದ್ದ ಹಣ-ಚಿನ್ನ ಕಳುವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಆಗ ವೃದ್ಧೆ ಮಹಾದೇವಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು , ಬಾಡಿಗೆದಾರನೇ ಕಳ್ಳತನ ಮಾಡಿದ್ದಾನೆಂದು ಪತ್ತೆ ಹಚ್ಚಿದ್ದಾರೆ. ಸದ್ಯ ಆರೋಪಿ ಸೆಲ್ವರಾಜ್ನಿಂದ 72 ಸಾವಿರ ನಗದು ಹಾಗೂ 78 ಗ್ರಾಂ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.