October 13, 2025
n610448670171634168974227f9a990a205a1b26b6b6aae7c0c0c26e25a6b03648ad63392b9e500bba4269b

ಮಂಗಳೂರು: ಇನ್ನೋವಾ ಕಾರು ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ ಇನ್ನೋವಾದಲ್ಲಿದ್ದ ತಾಯಿ, ಮಗ ದಾರುಣವಾಗಿ ಮೃತಪಟ್ಟು ನಾಲ್ಕೈದು ಮಂದಿ ಗಂಭೀರವಾದ ಗಾಯಗೊಂಡಿರುವ ಘಟನೆ ಮೇ 21 ರಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನಲ್ಲಿ ನಡೆದಿದೆ. ಪಾಣೆಮಂಗಳೂರು ಬೊಂಡಾಲದ ಶಬ್ಬೀರ್ ಎಂಬವರ ಮಗ ಮೊಹಮ್ಮದ್ ಶಫೀಕ್(20) ಹಾಗೂ ಶಬೀರ್ ಪತ್ನಿ ಸಫಿಯಾ(50) ಸಾವನ್ನಪ್ಪಿದವರು.
ಮೃತಪಟ್ಟಿರುವ ಶಫೀಕ್ ಕಾರು ಚಲಾಯಿಸುತ್ತಿದ್ದರು. ಇವರು ಮಂಗಳೂರಿನ ಕೊಣಾಜೆಯ ಪಿ ಎ ಇಂಜಿನಿಯರಿಂಗ್ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿ. ಇವರ ತಾಯಿ ಸಫಿಯಾ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಬಂಟ್ವಾಳ ತಾಲೂಕಿನ ಬೊಂಡಾಲದ ಕುಟುಂಬವೊಂದು ಬೆಂಗಳೂರಿನಿಂದ ಹಿಂತಿರುಗಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ

ಬೆಂಗಳೂರಿನಲ್ಲಿ ನಿನ್ನೆ ಮದುವೆಯ ಔತಣಕೂಟವಿತ್ತು. ಅದರಲ್ಲಿ ಕಾರಿನಲ್ಲಿದ್ದ ಕುಟುಂಬವೂ ಕೂಡ ಈ ಕೂಟದಲ್ಲಿ ಭಾಗವಹಿಸಿತ್ತು. 12 ಗಂಟೆ ರಾತ್ರಿಗೆ ಬೆಂಗಳೂರಿನಿಂದ ಮಂಗಳೂರಿನ ಮನೆಗೆ ಇನ್ನೋವಾ ಕಾರಿನಲ್ಲಿ ಹೊರಟಿದ್ದರು.

ಶಿರಾಡಿ ಘಾಟಿಯಲ್ಲಿ ಟ್ರಕ್‌ವೊಂದು ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ. ಕಾರು ಶಿರಾಡಿ ಘಾಟ್ ನ ಕೆಂಪು ಹೊಳೆ ಸಮೀಪಿಸುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೈನರ್ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಗಾಯಗೊಂಡವರಿಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಈ ಪೈಕಿ ಗಂಭೀರ ಗಾಯಗೊಂಡಿದ್ದ ತಾಯಿ, ಮಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಮೂವರು ಮಕ್ಕಳು ಕೂಡಾ ಇದ್ದು, ಅವರಿಗೂ ಕೂಡ ಗಂಭೀರ ಸ್ವರೂಪದ ಗಾಯಗಳಾಗಿದೆ.

Leave a Reply

Your email address will not be published. Required fields are marked *