ವಾರಣಾಸಿ:’ಪ್ರತಿ ಮತಗಟ್ಟೆಯಲ್ಲಿ 20-25 ಮಹಿಳೆಯರು ಸೇರಿಕೊಂಡು ತಟ್ಟೆ, ನಗಾರಿ ಬಾರಿಸುತ್ತಾ ಹಾಡು ಹಾಡುತ್ತಾ 10 ಮೆರವಣಿಗೆ ಮಾಡಿ ಜಾಗೃತಿ ಮೂಡಿಸಿದರೆ ಮತದಾನ ಪ್ರಮಾಣ ತನ್ನಿಂತಾನೇ ಹೆಚ್ಚಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಸಂಜೆ ಸ್ವಕ್ಷೇತ್ರ ವಾರಾಣಸಿಯಲ್ಲಿ ನಡೆದ ನಾರಿ ಶಕ್ತಿ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ‘ಬಿಜೆಪಿಗರು 20-25 ಮಹಿಳೆಯರನ್ನು ಸೇರಿಸಬೇಕು. ಈ ಮಹಿಳೆಯರು ನಗಾರಿ ಬಾರಿಸುತ್ತಾ, ತಟ್ಟೆ ಬಾರಿಸುತ್ತಾ, ಹಾಡು ಹೇಳುತ್ತಾ ಮತಗಟ್ಟೆಗೆ ವ್ಯಾಪ್ತಿಯಲ್ಲಿ 8-10 ಮೆರವಣಿಗೆಗಳನ್ನು ನಡೆಸಿದರೆ, ಮತದಾನದ ಅಂಕಿಅಂಶಗಳು ಚಿಗುರೊಡೆಯುತ್ತವೆ’ ಎಂದರು. ಈ ಹಿಂದೆ ಕೋವಿಡ್ ಮಹಾಮಾರಿಯ ವೇಳೆ ಕೂಡ ಮೋದಿ ಅವರು ತಟ್ಟೆ ಬಾರಿಸಿ ಜಾಗೃತಿ ಮೂಡಿಸುವ ಚಳವಳಿಗೆ ಕರೆ ನೀಡಿ ಗಮನ ಸೆಳೆದಿದ್ದರು
ಬಿಜೆಪಿಗರು 20-25 ಮಹಿಳೆಯರನ್ನು ಸೇರಿಸಬೇಕು. ಈ ಮಹಿಳೆಯರು ನಗಾರಿ ಬಾರಿಸುತ್ತಾ, ತಟ್ಟೆ ಬಾರಿಸುತ್ತಾ, ಹಾಡು ಹೇಳುತ್ತಾ ಮತಗಟ್ಟೆಗೆ ವ್ಯಾಪ್ತಿಯಲ್ಲಿ 8-10 ಮೆರವಣಿಗೆಗಳನ್ನು ನಡೆಸಿದರೆ, ಮತದಾನದ ಅಂಕಿ- ಅಂಶಗಳು ಚಿಗುರೊಡೆಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.