ಬೆಂಗಳೂರು: ಸಂಪ್ಗೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಅಯ್ಯಪ್ಪ ನಗರದ ವಿಶಾಲ್ ಮಾರ್ಟ್ ಮುಂಭಾಗದಲ್ಲಿ ನಡೆದಿದೆ. ನೇಪಾಳ ಮೂಲದದಂಪತಿಯ ಪುತ್ರ ಸುಬೀನ್(5) ಮೃತ ಮಗು. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ನೇಪಾಳ ಮೂಲದ ದಂಪತಿ, ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಇನ್ನು ಕೆಲಸದಿಂದ ಬಂದು ಮಗು ಕಾಣದೆ ಇದ್ದಾಗ ತಂದೆ-ತಾಯಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಂಪಿನಲ್ಲಿ ಮಗು ಪತ್ತೆಯಾಗಿದೆ. ಕೂಡಲೇ ಕೆಆರ್ ಪುರಂ ಸರ್ಕಾರಿ ಆಸ್ಪತ್ರೆ ಮಗುವನ್ನ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಷ್ಟರವಳೆಗೆ ಮಗು ಕೊನೆಯುಸಿರೆಳೆದಿತ್ತು. ಈ ಕುರಿತು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.