September 17, 2024

ಹುಬ್ಬಳ್ಳಿ : ಹುಬ್ಬಳ್ಳಿ:ನಗರದಲ್ಲಿ ಒಂದೆಡೆ ನಿರಂತರವಾಗಿ ಕ್ರೈಂ ರೇಟ್ ಹೆಚ್ಚಳವಾಗುತ್ತಿದೆ ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವೈಫಲ್ಯವಾದ ಹಿನ್ನೆಲೆ ಹೋಮ್ ಮೀನಿಸ್ಟರ್ ಅವರು.ಅವಳಿ ನಗರದ ಕಾನೂನು ಸುವ್ಯವಸ್ಥೆ ಡಿಸಿಪಿ ಪಿ ರಾಜೀವ್ ಹಾಗೂ ಇನ್ಸ್ಪೆಕ್ಟರ್ ಚಿಕ್ಕೋಡಿ ಮತ್ತು ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ.

ಆದ್ರೆ ಇಂತಹ ಸನ್ನಿವೇಶದಲ್ಲಿಯೇ ಇನ್ಸ್ಪೆಕ್ಟರ್ ಒಬ್ಬರು ಪ್ರತಿ ಸ್ಪಾ ಅಡ್ಡೆಗಳಿಂದ 25 ಸಾವಿರ ಹಣವನ್ನು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಕುರಿತು ಇದೀಗ ಸ್ಪಾ ಮಾಲಕರು ಹೋಮ್ ಮಿನಿಸ್ಟರ್ ಅವರಿಗೆ ಮನವಿ ಕೊಡಲು ಕೂಡಾ ಮುಂದಾಗಿದ್ದಾರೆ.ನಗರದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ ಆಗುತ್ತಿದ್ದು ಇವುಗಳಿಗೆ ಕಡಿವಾಣ ಹಾಕಬೇಕಾದ ಅಧಿಕಾರಿ ಮಾತ್ರ ನಿವೇನಾದ್ರು ಮಾಡಿ ನನಗೆ ಹಣ ಕೊಡಿ ಅಂತಾ ವಸೂಲಿ ಮಾಡಿದ್ದಾರಂತೇ.

ಸೋಮವಾರ ಕೊಲೆಯಾದ ಅಂಜಲಿ ಮನೆಗೆ ಭೇಟಿ ನೀಡಲಿರುವ ಹೋಮ್ ಮಿನಿಸ್ಟರ್ ಜಿ ಪರಮೇಶ್ವರ ನಂತರ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಲಿದ್ದಾರೆ.ಹೀಗಾಗಿ ಸ್ಪಾ ಮಾಲೀಕರು ತಮ್ಮಿಂದ ಹಣವನ್ನು ಪಡೆದಂತಹ ಪೊಲೀಸ್ ಅಧಿಕಾರಿಯ ಕುರಿತು ದೂರು ಕೊಡಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *