ಹುಬ್ಬಳ್ಳಿ : ಛೋಟಾ ಮುಂಬೈ ಖ್ಯಾತಿಯ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದಿಲ್ಲ ಒಂದು ನಕಲಿ ಪದಾರ್ಥ ಉತ್ಪಾದಿಸುವುದು ಹಾಗೂ ಮಾರಾಟ ಮಾಡುವುದು ಸರ್ವೇ ಸಾಮಾನ್ಯ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ವ್ಯವಸ್ಥಿತವಾಗಿ ದೊಡ್ಡ ದೊಡ್ಡ ಕುಳಗಳು ಈ ನಕಲಿ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ತಲುಪಿಸಿ ನಂತರ ಇತರೆ ಬ್ರಾಂಡ್ ಹಾಗೂ ಯಾವುದೇ ಹೆಸರು ನೀಡದೆ ಬಡ ಮಧ್ಯಮ ವರ್ಗದ ಜನರಿಗೆ ಹಾಗು ಹೋಟೆಲ್ ಗಳಿಗೆ ತಲುಪಿಸಿ ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟ ಆಡಲಾಗುತ್ತಿದೆ.
ಸದ್ಯ ಹುಬ್ಬಳ್ಳಿಯ ಪ್ರಮುಖ ಮಾರುಕಟ್ಟೆಯಲ್ಲಿ ನಕಲಿ ಹಾಗು ಕೆಮಿಕಲ್ ಮಿಶ್ರಿತ ಖಾರದ ಪುಡಿ ತಯಾರು ಮಾಡಿ ಮಾರಾಟ ಮಾಡುವ ಜಾಲ ಪತ್ತೆಯಾಗಿದ್ದು, ಸಂಬಂಧಪಟ್ಟ ಆರೋಗ್ಯ ಇಲಾಖೆ ಹಾಗು ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಂಶಯಕ್ಕೆ ಕಾರಣವಾಗಿದೆ. ಇನ್ನು ಈ ದಂಧೆಯ ಸಂಪೂರ್ಣ ಕಹಾನಿಯನ್ನು BNEWS ಸದ್ಯದಲ್ಲೇ ಬಿಚ್ಚಿಡಲಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.