
ಧಾರವಾಡ : ರೇಷ್ಮಾ ಕಂದಕಲ್ ಎಂಬುವವರ ಮನೆಗೆ ಕನ್ನ ಹಾಕಿದ್ದ ಕಳ್ಳರಿಬ್ಬರನ್ನು ಬಂಧಿಸುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಧಾರವಾಡ ಲಕ್ಷ್ಮೀಗಿರಿಯ ಮಂಜುನಾಥ ಹುಲ್ಲೂರ ಹಾಗೂ ಧಾರವಾಡ ಹೊಸಯಲ್ಲಾಪುರ ನಿವಾಸಿ ವಿನೋದ ಕಿರ್ಗಿ ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ 84 ಗ್ರಾಂ ಚಿನ್ನ ಮತ್ತು ಮೂರು ಬೈಕ್‌ಗಳು ವಶಕ್ಕೆ ಪಡೆಯಲಾಗಿದೆ.
ವಿದ್ಯಾಗಿರಿ ಠಾಣೆ ಇನ್‌ಸ್ಪೆಕ್ಟರ್ ಸಂಗಮೇಶ ದಿಡಿಗನಾಳ ನೇತೃತ್ವದಲ್ಲಿ ಪಿಎಸ್‌ಐ ಪ್ರಮೋದ ಎಚ್.ಜಿ, ಐ.ಐ.ಮದರಖಂಡಿ, ಬಿ.ಪಿ.ಧುಮಾಳ, ಎಂ.ಸಿ.ಮಂಕಣಿ, ಬಿ.ಎಂ.ಪಠಾತ್, ಆನಂದ ಬಡಿಗೇರ, ಮಹಾಂತೇಶ ವೈ.ಎಂ, ಲಕ್ಷ್ಮಣ ಲಮಾಣಿ, ಸಾಗರ ಕುಂಕುಮಗಾರ, ರಮೇಶ ಕೊತಂಬ್ರಿ, ಉಷಾ ಎಂ.ಎಚ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಗಳು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆಯಲ್ಲೂ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಕಿಲಾಡಿ ಕಳ್ಳರನ್ನು ಬಂಧಿಸಿದ ಈ ಪೊಲೀಸ್ ತಂಡಕ್ಕೆ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ ಬಹುಮಾನ ಘೋಷಣೆ ಮಾಡಿದ್ದಾರೆ.