
ಹುಬ್ಬಳ್ಳಿ: ಹುಬ್ಬಳ್ಳಿಯ ಹೊರವಲಯದ ಹುಬ್ಬಳ್ಳಿ-ವಿಜಯಪುರ ಮುಖ್ಯ ರಸ್ತೆಯ ರಾಮ್ ಹೂಂಡೈ ಶೋ ರೂಂ ಬಳಿಯಲ್ಲಿ ಬಸ್ ಪಲ್ಟಿ ಹೊಡೆದ ಪರಿಣಾಮ ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ಶುಕ್ರವಾರ ತಪ್ಪಿದಂತಾಗಿದೆ.
ಕೆ.ಎಸ್.ಆರ್.ಟಿ.ಸಿ ಬಸ್ಸೆಂದು ವಿಜಯಪುರದಿಂದ ಹುಬ್ಬಳ್ಳಿಗೆ ಹೊರಟಿದ್ದ ಸಂದರ್ಭದಲ್ಲಿ ಇಲ್ಲಿನ ರಾಮ್ ಹೊಂಡೈ ಶೋ ರೂಂ ಬಳಿಯಲ್ಲಿ ಬಸ್ ಗೆ ಅಡ್ಡ ಬಂದಂತಹ ವಾಹನವನ್ನು ತಪ್ಪಿಸಲು ಹೋಗಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ.
ಬಸ್ ನಲ್ಲಿ ಇದ್ದಂತಹ ೧೫ ಪ್ರಯಾಣಿಕರ ಪೈಕಿ ಐವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಕೇಶ್ವಾಪೂರ ಪೂರ್ವ ಸಂಚಾರ ಠಾಣೆಯ ಪಿಎಸ್‌ಐ ಪುನೀತ್ ಕುಮಾರ್ ಹಾಗೂ ಸಿಬ್ಬಂದಿ ಮತ್ತು ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆದರು.