August 18, 2025
Picsart_24-05-16_09-22-09-533

ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಂದರೆ ಬಿಜೆಪಿ ಸರ್ಕಾರದ ಅಧಿಕಾರಿಗಳು ಎತ್ತಂಗಡಿ ನಂತರ ಅವಳಿನಗರದ ಕ್ರೈಮ್ ರೇಟ್ ಹೆಚ್ಚಾಗಿದೆ ಎನ್ನುವುದು ಬಿಜೆಪಿ ಶಾಸಕರ ಆರೋಪವಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ರಾಷ್ಟ್ರ ಮಟ್ಟದಲ್ಲಿ ಅವಳಿನಗರದ ಮಾನ ಹರಾಜು ಹಾಕುವ ಕ್ರೈಂ ಗಳು ಇಲ್ಲಿ ನಡೆದಿರುವ ದುರದೃಷ್ಟಕರ.

ಇನ್ನು ಸದ್ಯ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅಬ್ಬಯ್ಯ ಕ್ಷೇತ್ರದಲ್ಲೇ ಕ್ರೈಮ್ ರೇಟ್ ಹೆಚ್ಚಾಗಿದ್ದು. ಇವರ ಕೃಪಾ ಕಟಾಕ್ಷದಿಂದ ಉನ್ನತ ಹುದ್ದೆ ಅಲಂಕರಿಸಿದ ಅಧಿಕಾರಿಗಳು ಸದ್ಯ ಎತ್ತಂಗಡಿ ಮಾಡುವ ಸಾದ್ಯತೆ ಕೂಡ ದಟ್ಟವಾಗಿದೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ.

ಅವಳಿನಗರದಲ್ಲಿ ನೇಹಾ ಹಿರೇಮಠ ಕೊಲೆ ನಂತರ ಇದೆ ಮಾದರಿಯ ಒಟ್ಟು ಮೂರು ಪ್ರಕರಣಗಳು ಬೆಳಕಿಗೆ ಬಂದಿದ್ದವು ಇದರಲ್ಲಿ ಒಂದು ಪ್ರಕರಣ ಪ್ರಾಣ ಹಾನಿಯಾಗಿ ಮಾರ್ಪಟ್ಟಿದೆ.ಇದರಿಂದ ಸರ್ಕಾರ ತಲೆ ತಗ್ಗಿಸುವಂತ್ ವಾತಾವರಣ ನಿರ್ಮಾಣವಾಗಿದೆ. ನವನಗರ ಪೋಕ್ಸೋ ಪ್ರಕರಣದಲ್ಲಿ ಕಾಲಿಗೆ ಗುಂಡು ಹೊಡೆದ ಪೊಲೀಸರು ಇತರೆ ಪ್ರಕರಣಗಳಲ್ಲಿ ಕೈ ಕಟ್ಟಿ ಕುಳಿತುಕೊಳ್ಳುತ್ತಿರುವುದು ನೋಡಿ ಜನಸಾಮಾನ್ಯರು ಭಯಭೀತರಾಗಿದ್ದಾರೆ.

Leave a Reply

Your email address will not be published. Required fields are marked *