August 18, 2025
n608972190171582777775079cfc4e127a5df7de4b801475aea793deec9f7ca919e68a2e3a2ba6b8e44c7cf

ಬೆಂಗಳೂರು: ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ದಿವ್ಯಾ ಅಂತ ಗುರುತಿಸಲಾಗಿದೆ.

ಕೊಲೆ ಆರೋಪಿಯನ್ನು ಮೋನಿಕಾ (24) ಅಂತ ಗುರುತಿಸಲಾಗಿದ್ದು, ಸದ್ಯ ಈಕೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಮೋನಿಕಾ ಶೋಕಿಗಾಗಿ ವಿಪರೀತ ಕೈಸಾಲ ಮಾಡಿಕೊಂಡಿದ್ದಳು ಎನ್ನಲಾಗಿದೆ.

ಈ ನಡುವೆ ದಿವ್ಯಾ ಮನೆಯಲ್ಲಿದ್ದ ವೇಳೆಯಲ್ಲಿ ವೇಳೆ ಹಿಂಬದಿಯಿಂದ ಬಂದು ಕುತ್ತಿಗೆ ಹಿಸುಕಿ ಮೋನಿಕಾ ಕೊಲೆ ಮಾಡಿದ್ದಳು. ಕೊಲೆ ಮಾಡಿ ಕುತ್ತಿಗೆಯಲ್ಲಿದ್ದ 36 ಗ್ರಾಂ ಚಿನ್ನದ ಸರ ಕಸಿದುಕೊಂಡುತ್ತಿದ್ದಳು. ಸದ್ಯ ಪ್ರಕರಣ ದಾಖಲಿಸಿ ಮೋನಿಕಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *