ಹಾಸನ: ಅತ್ಯಾಚಾರ ಆರೋಗಳನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಂದೆ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅವರು ಮಂಗಳವಾರ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದರು.
ಮಹಿಳೆಯೊಬ್ಬರು ಅಪಹರಣ ಪ್ರಕರಣಕ್ಕೆ ಸಂಬಂಧಿಸಿಂದಂತೆ ಎರಡು ವಾರಗಳ ಹಿಂದೆ ಎಸ್ಐಟಿ ಅಧಿಕಾರಿಗಳು ಮಾಜಿ ಸಚಿವ ಮತ್ತು ಶಾಸಕ ಎಚ್ಡಿ ರೇವಣ್ಣ ಅವರನ್ನು ಬಂಧಿಸಿದ್ದರು. ತೀವ್ರಿ ವಿಚಾರಣೆಗೆ ಒಳಪಡಿಸಿ ನಾಲ್ಕು ದಿನ ನ್ಯಾಯಾಂಗ ಬಂಧನ, ನಂತರ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು.
ಪ್ರಕರಣ ಕುರಿತು ಜಾಮೀನು ನೀಡುವಂತೆ ಕೋರಿ ಎಚ್ಡಿ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.
ಜಾಮೀನು ಮಂಜೂರು ಆದ ಬೆನ್ನಲ್ಲೆ ಇಂದು ಮಂಗಳವಾರ ನಗರದ ಪರಪ್ಪನ ಅಗ್ರಹಾರ ಜೈಲಿನಿಂದ ಎಚ್ಡಿ ರೇವಣ್ಣ ಬಿಡುಗಡೆ ಆದರು. ಇದರೊಂದಿಗೆ ಅವರ ಹನ್ನೊಂದು ದಿನಗಳ ಸೆರೆವಾಸ ಅಂತ್ಯ ಕಂಡಿದೆ. ಕೋರ್ಟ್ ಕೆಲವು ಷರತ್ತುಗಳನ್ನು ಹಾಕಿ ಜಾಮೀನು ಮಂಜೂರು ಮಾಡಿದ ಬಳಿಕ ಅವರ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆಯಿತು.