November 22, 2024

ಧಾರವಾಡ : ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ಜರುಗಿಸಲು ಏ.12 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಮೇ.7 ರಂದು ಧಾರವಾಡ ಲೋಕಸಭೆ ಮತಕ್ಷೇತ್ರದಲ್ಲಿ ಮುಕ್ತ, ನಿಷ್ಪಕ್ಷಪಾತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಮತದಾನ ಜರುಗಿಸಲು ಧಾರವಾಡ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿದ್ದು, ಶಿಕ್ಷಿತರ, ಪ್ರಜ್ಞಾವಂತರ ಜಿಲ್ಲೆಯಾಗಿರುವ ಇಲ್ಲಿ ಮೇ.7 ರಂದು ತಪ್ಪದೇ ಮತಗಟ್ಟೆಗೆ ಬಂದು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು. ಈ ಮೂಲಕ ತಮ್ಮ ಮತದಾನ ಕರ್ತವ್ಯ ಪ್ರಜ್ಞೆ ಮೆರೆದು ಇತರರಿಗೆ ಮಾದರಿ ಆಗಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಡಿಸಿ ಕಚೇರಿ ಸಭಾಂಗಣದ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಮೇ.7 ಮತದಾನ ಸಿದ್ದತೆ ಹಾಗೂ ಮತಗಟ್ಟೆಯಲ್ಲಿ ಮತದಾರರಿಗೆ ಕಲ್ಪಿಸಿರುವ ವ್ಯವಸ್ಥೆ, ಕಾನೂನು ಸುವ್ಯವಸ್ಥೆಗೆ ಕೈಗೊಂಡ ಕ್ರಮಗಳ ಕುರಿತು ಪತ್ರಿಕಾಗೋಷ್ಠಿ ಜರುಗಿಸಿ, ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ, ಮಾತನಾಡಿದರು.
ಧಾರವಾಡ ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ನಿಯಮಾನುಸಾರ ಜರುಗಿಸಲು ಅಗತ್ಯವಿರುವ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಹವಾಮಾನ ಇಲಾಖೆ ಬಿಸಿ ಗಾಳಿ, ಶಾಖ ಉμÁ್ಣಂಶ ಹೆಚ್ಚಳದ ಬಗ್ಗೆ ಮುನ್ನಚ್ಚರಿಕೆ ನೀಡಿದ್ದು, ಸಾರ್ವಜನಿಕರಿಗೆ ಹಾಗೂ ಮತದಾರರಿಗೆ ಈ ಕುರಿತು ಆರೋಗ್ಯ ಸುರಕ್ಷಾ ಕ್ರಮಗಳನ್ನು ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

*ಮತದಾನ ದಿನ ಕರ್ತವ್ಯ ನಿರ್ವಹಿಸುವ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ಮೈಕ್ರೋ ಅಬ್ಸರ್ವರ್‍ಗಳು:* ಧಾರವಾಡ ಲೋಕಸಭಾ ಚುನಾವಣೆಯಲ್ಲಿ 1180 ಪುರುಷರು, 755 ಮಹಿಳೆಯರು ಸೇರಿ ಒಟ್ಟು 1935 ಪಿಆರ್‍ಓಗಳು ಕಾರ್ಯನಿರ್ವಹಿಸಲಿದ್ದಾರೆ. 1153 ಪುರುಷರು, 782 ಮಹಿಳೆಯರು ಸೇರಿ ಒಟ್ಟು 1935 ಎಪಿಆರ್‍ಓಗಳು ಕಾರ್ಯನಿರ್ವಹಿಸಲಿದ್ದಾರೆ. 1574 ಪುರುಷರು, 2296 ಮಹಿಳೆಯರು ಸೇರಿ ಒಟ್ಟು 3870 ಪೆÇಲಿಂಗ್ ಆಫಿಸರ್‍ಗಳು ಕಾರ್ಯನಿರ್ವಹಿಸಲಿದ್ದಾರೆ ಹಾಗೂ ಒಟ್ಟು 346 ಮೈಕ್ರೋ ಅಬ್ಸರ್ವರ್‍ಗಳಿದ್ದು, ಒಟ್ಟಾರೆಯಾಗಿ 8086 ಸಿಬ್ಬಂದಿಗಳು ಚುನಾವಣೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ದಿವ್ಯ ಪ್ರಭು ಅವರು ತಿಳಿಸಿದರು.

*ವಿಜಿಲ್ ಆ್ಯಪ್:* ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಿ-ವಿಜಿಲ್ (c-Vigil) ನಲ್ಲಿ ಒಟ್ಟು 1833 ದೂರುಗಳು ಸ್ವೀಕೃತವಾಗಿದ್ದು, 1787 ವಿಲೇವಾರಿ ಮಾಡಲಾಗಿದೆ.

*1950 ಸಹಾಯವಾಣಿ:* ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ 1950 ಸಹಾಯವಾಣಿ ಮೂಲಕ ಒಟ್ಟು 950 ದೂರುಗಳು ಸ್ವೀಕೃತವಾಗಿದ್ದು, 950 ವಿಲೇವಾರಿ ಮಾಡಲಾಗಿರುತ್ತದೆ.

*ಹಿರಿಯ, ವಿಕಲಚೇತನ ಮತದಾರ ನೆರವಿಗೆ 1901 ಸ್ವಯಂ ಸೇವಕರು:** ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ ಪ್ರತಿ ಮತಗಟ್ಟೆಗೂ ಒಬ್ಬರಂತೆ 1901 ಸ್ವಯಂ ಸೇವಕರನ್ನು ಗುರುತಿಸಲಾಗಿದ್ದು, ಮತದಾನದ ದಿನ ವಿಶೇಷಚೇತನರಿಗೆ ಹಾಗೂ ವಯೋವೃದ್ಧರಿಗೆ ಮತದಾನ ಮಾಡಲು ಮತಗಟ್ಟೆ ಒಳಗೆ ಹೋಗಲು ಅಗತ್ಯವಿದ್ದಲ್ಲಿ ಸಹಾಯ ಮಾಡಲು ಸ್ವಯಂ ಸೇವಕರನ್ನು ನೇಮಿಸಲಾಗಿದೆ.

*ಮತಗಟ್ಟೆಯಲ್ಲಿ ವಿಲ್ ಚೇರ್ ವ್ಯವಸ್ಥೆ:* ಧಾರವಾಡ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ಧಾರವಾಡ ಜಿಲ್ಲೆಯಲ್ಲಿನ ಎಲ್ಲ 968 ಮತಗಟ್ಟೆ ಲೊಕೇಷನ್‍ಗಳಿಗೆ ವೀಲ್ ಚೇರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮತಗಟ್ಟೆ ಆವರಣದಲ್ಲಿ ವಿಶ್ರಾಂತಿ ಕೊಠಡಿ: ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯವಿದ್ದಲ್ಲಿ ಪ್ಯಾನ್, ಮತದಾರರಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

968 ವೈದ್ಯಕೀಯ ಸಿಬ್ಬಂದಿ: ಧಾರವಾಡ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲ 968 ಮತಗಟ್ಟೆ ಲೊಕೇಷನ್‍ಗಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ.

*ಮತದಾರರಿಗೆ ವೊಟರ್ ಸ್ಲಿಪ್ ಹಂಚಿಕೆ:* ಜಿಲ್ಲೆಯ ಎಲ್ಲ 8 ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಶೇ.98.74 ಮತದಾರರಿಗೆ ಮತದಾರ ಮಾರ್ಗದರ್ಶಿ(ವೊಟರ್ ಗೈಡ್), ಶೇ. 98.83 ರಷ್ಟು ಮತದಾರರಿಗೆ ಮತದಾರಚೀಟಿಗಳು (ವೊಟರ್ ಸ್ಲಿಪ್), ಮತ್ತು ಶೇ. 97.59 ರಷ್ಟು ಯುವ ಮತದಾರರನ್ನು ಆಹ್ವಾನಿಸಿ, ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಶುಭಾಶಯ ಪತ್ರಗಳನ್ನು ವಿತರಿಸಿ, ಪ್ರತಿಯೊಬ್ಬರು ಮತದಾನಕ್ಕೆ ಬರುವಂತೆ ಪೆÇ್ರತ್ಸಾಹಿಸಿ, ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಕಾವಲಿಗೆ ಇರುವ ವಿವಿಧ ತಂಡಗಳು: ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರವಾರು 8 ಜನ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳು, 66 ಪ್ಲೈಯಿಂಗ್ ಸ್ಕ್ವಾಡ್ ತಂಡ, 84 ಸ್ಟ್ಯಾಟಿಕ್ ಸರ್ವೆಲೈನ್ ಟೀಮ್, 16 ವಿಡಿಯೋ ಸರ್ವೆಲೈನ್ ಟೀಮ್, 24 ವಿಡಿಯೋ ವೀವಿಂಗ್ ಟೀಮ್, 12 ಅಕೌಂಟಿಂಗ್ ಟೀಮ್, 11 ಜನ ಸಹಾಯಕ ಲೆಕ್ಕ ವೀಕ್ಷಕರಗಳು ಹಾಗೂ 5 ಮೊಬೈಲ್ ಸರ್ವೆಲೈನ್ ತಂಡ ಸೇರಿ ಒಟ್ಟು 226 ಜನ ಅಧಿಕಾರಿ ಸಿಬ್ಬಂದಿಗಳು ಇರುವ ತಂಡಗಳನ್ನು ನೇಮಿಸಿ ಆದೇಶಿಸಲಾಗಿದೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

*ಸಖಿ, ಯುವ, ಪಿಡಬ್ಲ್ಯೂಡಿ ಸೇರಿ ಸ್ಥಾಪಿತ ವಿಶೇಷ ಮತಗಟ್ಟೆಗಳು:* ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ ಜಿಲ್ಕೆಯಲ್ಲಿ ಸ್ಥಾಪಿಸಲಾದ 40 ಮಹಿಳಾ ಸಿಬ್ಬಂದಿಗಳು ನಿರ್ವಹಿಸುವ ಸಖಿಮತಗಟ್ಟೆಗಳು, 8 ಯುವ ಸಿಬ್ಬಂದಿಗಳು ನಿರ್ವಹಿಸುವ ಯುವಮತಗಟ್ಟೆಗಳು, 8 ವಿಕಲಚೇತನ ಸಿಬ್ಬಂದಿಗಳು ನಿರ್ವಹಿಸುವ ವಿಶೇಷಚೇತನರ ಮತಗಟ್ಟೆಗಳು, 8 ಜನಾಂಗದ ವಿಶೇಷತೆ (ಎಥಿನಿಕ್) ಆಧಾರಿತ ಮತದಾನ ಕೇಂದ್ರಗಳು ಹಾಗೂ 8 ಥೀಮ್ ಆಧಾರಿತ ಮತದಾನ ಕೇಂದ್ರಗಳು ಸೇರಿ ಒಟ್ಟು 72 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದೆ. ಮತದಾರರನ್ನು ಆಕರ್ಷಿಸುವ ಮೂಲಕ ಮತದಾನ ಹೆಚ್ಚಳಕ್ಕೆ ಈ ಮೂಲಕ ಕ್ರಮವಹಿಸಲಾಗಿದೆ ಎಂದು ದಿವ್ಯ ಪ್ರಭು ಅವರು ತಿಳಿಸಿದರು.
*2019ರ ಚುನಾವಣೆಯ ಶೇಕಡವಾರು ಮತದಾನ:* 2019ರ ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ ಶೇ.70.12 ರಷ್ಟು ಮತದಾನವಾಗಿತ್ತು.
ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 71.48, ಕುಂದಗೋಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 73.01 ರಷ್ಟು ಮತದಾನ ವಾಗಿದೆ. ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 71.95 , ಹುಬ್ಬಳ್ಳಿ, ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 71.56, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 64.64, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 64.02 , ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶೇ.75.64 ಹಾಗೂ ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 71.64, ಮತದಾನವಾಗಿತ್ತು. ಒಟ್ಟಾರೆಯಾಗಿ ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಮತಕ್ಷೇತ್ರಗಳು ಸೇರಿ ಶೇಕಡವಾರು 70.12 ರಷ್ಟು ಮತದಾನವಾಗಿತ್ತು ಎಂದು ಅವರು ತಿಳಿಸಿದ್ದಾರೆ.

*ಮುಕ್ತ, ನ್ಯಾಯೋಚಿತ ಮತದಾನಕ್ಕಾಗಿ ಪೊಲೀಸ್ ಪಥಸಂಚಲನ:* ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಧಾರವಾಡದ ಜಿಲ್ಲೆಯ ಮತದಾರರಲ್ಲಿ ಆತ್ಮಸ್ಥೈರ್ಯ ತುಂಬಲು ಮತ್ತು ಮುಕ್ತ, ನ್ಯಾಯೋಚಿತ ಮತದಾನಕ್ಕಾಗಿ ಜಿಲ್ಲೆಯ 57 ಸ್ಥಳಗಳಲ್ಲಿ ಪೊಲೀಸ್ ಪಥಸಂಚಲನ ಕೈಗೊಳ್ಳಲಾಗಿದೆ.

*ಮನೆಯಿಂದ ಮತದಾನ:* ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1405 ಜನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ನೋಂದಣಿಯಾಗಿದ್ದು, 1,346 ಜನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮನೆಯಿಂದ ಮತದಾನ ಮಾಡಿದ್ದಾರೆ. 449 ಜನ ವಿಕಲಚೇತನರು ನೋಂದಣಿಯಾಗಿದ್ದು, 439 ಜನ ಮನೆಯಿಂದ ಮತದಾನ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಅಂಚೆ ಮತದಾನದ ವಿವರ ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,159 ಜನ 12ಡಿ ಅರ್ಜಿಯನ್ನು ಎವಿಇಎಸ್ ಮತದಾರರು ತುಂಬಿಕೊಟ್ಟಿದ್ದರು, 604 ಜನ ಅಂಚೆ ಮೂಲಕ ಮತದಾನ ಮಾಡಿದ್ದಾರೆ. ಚುನಾವಣಾ ಕರ್ತವ್ಯ ನಿರತ ಅನ್ಯ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲೆಯ ತಹಶೀಲ್ದಾರ ಕಾರ್ಯಾಲಯದಲ್ಲಿ ಅಂಚೆ ಮತದಾನವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಚುನಾವಣಾ ಕರ್ತವ್ಯ ನಿರತ ಅನ್ಯ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗಳಿಗೆ ಅಂಚೆ ಮತದಾನ ಸೌಲಭ್ಯವನ್ನು ನೀಡಲಾಗಿದ್ದು 2,544 ಅಂಚೆ ಮತದಾನಗಳನ್ನು ವಿನಿಮಯ ಮಾಡಲಾಗಿದ್ದು, 1,921 ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಮತದಾನ ಮಾಡಿದ್ದಾರೆ ಎಂದು ಅವರು ಹೇಳಿದರು.

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗಳಿಗೆ ಇಡಿಸಿ ಯನ್ನು ಅನುಮೋದಿಸಲಾಗಿದೆ. 7,863 ಆರ್‍ಓಗಳಿಗೆ ಇಡಿಸಿ ಅನ್ನು ಅನುಮೋದಿಸಲಾಗಿದೆ ಎಂದು ಅವರು ಹೇಳಿದರು.

ವಿಓಇಡಿ (VOED) ಮತದಾನವು ತಹಶೀಲ್ದಾರ ಕಾರ್ಯಾಲಯದಲ್ಲಿ ಮೇ 6 ವರೆಗೆ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ಮೂರನೇ ಹಂತದ ಲೋಕಸಭಾ ಚುನಾವಣೆಯ ಕ್ಷೇತ್ರಗಳಲ್ಲಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಮತದಾರರಿಗೆ (VOED) ಅಂಚೆ ಮತಪತ್ರಗಳನ್ನು ಒದಗಿಸುವ ಸಲುವಾಗಿ ಅಂಚೆ ಮತಪತ್ರ ವಿನಿಮಯ ಕೇಂದ್ರವನ್ನು ಜಿಲ್ಲೆಯ ವಿದ್ಯಾನಗರದ ಜೆ.ಎಸ್.ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ತೆರೆಯಲಾಗಿದೆ ಎಂದು ಅವರು ಹೇಳಿದರು.

ವಿಧಾನಸಭಾ ಮತಕ್ಷೇತ್ರವಾರು ಡಿ-ಮಸ್ಟರಿಂಗ್ ಕೇಂದ್ರಗಳ ಮಾಹಿತಿ ನಾಳೆ ಮೇ. 6 ರಂದು ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಮತಕ್ಷೇತ್ರಗಳ ಕೇಂದ್ರ ಸ್ಥಾನದಲ್ಲಿ ಡಿ-ಮಸ್ಟರಿಂಗ ಕಾರ್ಯ ಜರುಗಲಿದೆ.

ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಶ್ರೀ ಶಂಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕುಂದಗೋಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕುಂದಗೋಳ ಪಟ್ಟಣದ ಶ್ರೀ ಹರಭಟ್ಟ ಪಿಯು ಕಾಲೇಜು, ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ ನಗರದ ಬಾμÉಲ್ ಮಿಷನ್ ಇಂಗ್ಲೀμï ಮಾಧ್ಯಮ ಪ್ರೌಡ ಶಾಲೆ, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ವಿದ್ಯಾನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಲ್ಯಾಮಿಂಗ್ಟನ್ ಬಾಲಕ ಮತ್ತು ಬಾಲಕಿಯರ ಶಾಲೆ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಆರ್.ಎಲ್.ಎಸ್. ಸಂಯುಕ್ತ ಪೂರ್ವ ವಿಶ್ವವಿದ್ಯಾಲಯ ಕಾಲೇಜು, ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕಲಘಟಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಒಳಪಡುವ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಶಿಗ್ಗಾಂವ ನಗರದ ಜೆಎಂಜೆ ಶಾಲೆಯಲ್ಲಿ ಡಿ-ಮಸ್ಟರಿಂಗ್ ಕೇಂದ್ರವನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು.

ಕೃವಿವಿಯಲ್ಲಿ ಮತ ಏಣಿಕೆ ಕೇಂದ್ರ ಸ್ಥಾಪನೆ ಮೇ.7 ರಂದು ಜರುಗುವ ಮತದಾನದ ಮತ ಏಣಿಕೆ ಕೇಂದ್ರವನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗುತ್ತದೆ. ಜೂನ 4 ರಂದು ಬೆಳಿಗ್ಗೆ 7 ಗಂಟೆಗೆ ಮತ ಏಣಿಕೆ ಕೇಂದ್ರವನ್ನು ತೆರೆಯಲಾಗುತ್ತದೆ ಎಂದು ಅವರು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ಜಪ್ತಿ ಹಾಗೂ ಎಪ್.ಐ.ಆರ್ ಪ್ರಕರಣಗಳು: ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ ಜಿಲ್ಲೆಯಲ್ಲಿ ಮಾರ್ಚ 16 ರಿಂದ ಇವತ್ತಿನವರೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಡಿ ನಗದು ರೂ. 20,37,02,970 ಮತ್ತು ಚಿನ್ನ, ನಗದು, ಡ್ರಗ್ಸ್, ಮದ್ಯ, ಉಚಿತ ಕೊಡುಗೆಗಳು ಸೇರಿದಂತೆ ರೂ.1,14,15,247 ಗಳ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ ನಗದು ಸೇರಿ ರೂ. 21,51,08,357 ಗಳ ಮಾಲ್ಯದ ವಸ್ತುಗಳು ಜಪ್ತಿಯಾಗಿವೆ ಮತ್ತು ಕ್ಯಾಶ್ ರೀ ಅಡ್ರಸಲ್ ಕಮೀಟಿಯಿಂದ ಜಪ್ತಿಗೆ ಸರಿಯಾದ ದಾಖಲೆ ಸಲ್ಲಿಸಿದ ಪ್ರಕರಣಗಳಲ್ಲಿ ಅವುಗಳ ಮಾಲೀಕರಿಗೆ ಇವತ್ತಿನವರೆಗೆ ರೂ. 24,91,070 ಗಳ ನಗದು ಮರಳಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಾಗಿ ಮಹಾನಗರ ಪೆÇಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ 35 ಪ್ರಕರಣಗಳು, ಜಿಲ್ಲಾ ಪೆÇಲೀಸ್ ವ್ಯಾಪ್ತಿಯಲ್ಲಿ 55 ಪ್ರಕರಣಗಳು ಹಾಗೂ ಅಬಕಾರಿ ಇಲಾಖೆ ವ್ಯಪ್ತಿಯಲ್ಲಿ 1,378 ಪ್ರಕರಣಗಳು ದಾಖಲಿಸಿದೆ. ಒಟ್ಟಾರೆಯಾಗಿ 1,468 ಪ್ರಕರಣಗಳು ಇವತ್ತಿನವರೆಗೆ ದಾಖಲಾಗಿವೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

*ಮತಗಟ್ಟೆ ಸಮೀಪದಲ್ಲಿ ಇಲೆಕ್ಷನ್ ಬೂತ್ ಸ್ಥಾಪನೆಗೆ ನಿಬಂಧನೆಗಳು:* ಅಭ್ಯರ್ಥಿಗಳು ಮತಗಟ್ಟೆಯ 200ಮೀ ಪ್ರದೇಶ ವ್ಯಾಪ್ತಿಯ ಹೊರಗಡೆ ನಿಯಮಾನುಸಾರ ಅನುಮತಿ ಪಡೆದು, ತಮ್ಮ ಎಲೆಕ್ಷನ್ ಬೂತ್‍ಗಳನ್ನು ಸ್ಥಾಪಿಸಬಹುದು.

ಇಲೆಕ್ಷನ್ ಬೂತ್‍ಗಳನ್ನು ಸ್ಥಾಪಿಸಲು ಇಚ್ಚಿಸಿದಲ್ಲಿ ಸ್ಥಳೀಯ ಸಂಸ್ಥೆಗಳ ನಿರಾಕ್ಷೇಪಣಾ ಪತ್ರಪಡೆದು ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ ಕೇಂದ್ರ ಸ್ಥಾಪಿಸಲಾಗಿದೆ. ಮತದಾನ ಕೇಂದ್ರದ ಆವರಣದ 200 ಮೀಟರ್ ಪರಿಧಿಯ ಹೊರೆ ಸ್ಥಾಪಿಸಲು ಇಚ್ಚಿಸುವ ಪ್ರತಿಯೊಂದು ಬೂತ್‍ಗಳಲ್ಲಿ ಒಂದು ಮೇಜು ಮತ್ತು ಎರಡು ಕುರ್ಚಿಗಳನ್ನು ಮಾತ್ರ ಒದಗಿಸಬೇಕು ಮತ್ತು 10 x 10 ಅಡಿಗಳಿಗಿಂತ ಹೆಚ್ಚು ಅಳತೆಯಿಲ್ಲದ ಛತ್ರಿ ಅಥವಾ ಸಣ್ಣ ಟೆಂಟ್ ಅನ್ನು ಒದಗಿಸಬೇಕು. ಪಕ್ಷದ ಚಿಹ್ನೆಗಳು, ಛಾಯಾಚಿತ್ರಗಳೊಂದಿಗೆ ಇಂದು ಬ್ಯಾನರ್ ಅನ್ನು ಅಳವಡಿಸಲು ಅನುಮತಿಸಲಾಗಿದೆ. ಅಲ್ಲಿ ಬಳಸುವ ಬ್ಯಾನರ್ ಗಾತ್ರವು 4 x 8 ಅಡಿ ಅಳತೆ ಮೀರಬಾರದು ಎಂದು ಅವರು ತಿಳಿಸಿದರು.

ಮತದಾನ ಅಂತ್ಯಗೊಳ್ಳುವ ಪೂರ್ವದ 48 ಗಂಟೆ ಅವಧಿಯಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ನಿμÉೀಧ: ಮತದಾನ ಅಂತ್ಯಗೊಳ್ಳುವ 48 ಗಂಟೆ ಪೂರ್ವದಲ್ಲಿ ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳು ಚುನಾವಣಾ ವಿಷಯಗಳ ಕುರಿತು ಮಾಧ್ಯಮ ಉದ್ದೇಶಿಸಿ ಮಾತನಾಡುವುದು ಅಥವಾ ಮಾಧ್ಯಮಗಳಿಗೆ ಸಂದರ್ಶನ ನೀಡುವುದನ್ನು ನಿಭರ್ಂದಿಸಲಾಗಿದೆ.

ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಮತದಾನ ದಿನದಂದು ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಯ ಭಾವಚಿತ್ರ ಹಾಗೂ ಚಿಹ್ನೆ, ಸ್ಲೋಗನ್ ಒಳಗೊಂಡಿರುವ ವೊಟರ್ ಸ್ಲಿಪ್‍ಗಳನ್ನು ಮತದಾರರಿಗೆ ವಿತರಿಸುವದನ್ನು ಹಾಗೂ ಬಳಸುವದನ್ನು ನಿμÉೀಧಿಸಲಾಗಿದೆ. ಮತ್ತು ಮತಗಟ್ಟೆಯೊಳಗೆ ಪ್ರವೇಶ ಮಾಡುವಾಗ ಮತದಾರರು ಹಾಗೂ ಇತರರು, ರಾಜಕಿಯ ಪಕ್ಷ ಅಥವಾ ಅಭ್ಯರ್ಥಿಯ ಭಾವಚಿತ್ರ, ಚಿಹ್ನೆ ಮತ್ತು ಸ್ಲೋಗನ್ ಹೊಂದಿರುವ ಕ್ಯಾಪ್, ಟವಲ್, ಸ್ಕಾರ್ಪ್, ಟೀ ಶರ್ಟ್ ಸೇರಿದಂತೆ ಇಂತಹ ಬಟ್ಟೆಗಳನ್ನು ಧರಿಸಿ, ಮತಗಟ್ಟೆಯ ನುಭರ್ಂದಿತ ಪ್ರದೇಶದಲ್ಲಿ ಬರಬಾರದು ಮತ್ತು ಯಾವುದೇ ರೀತಿಯ ರಾಜಕೀಯ ಸಂಕೇತಗಳಿಲ್ಲದ ಯಾವುದೇ ಬಣ್ಣದ ಬಟ್ಟೆ ಧರಿಸಿ ಬರಬಹುದು ಎಂದು ಅವರು ತಿಳಿಸಿದರು.

ಮತಗಟ್ಟೆಯಲ್ಲಿ ಹಾಗೂ ಮತಗಟ್ಟೆ ವ್ಯಾಪ್ತಿಯಲ್ಲಿ ಪ್ರಚಾರ ನಿಷೇಧ: ಯಾವುದೇ ವ್ಯಕ್ತಿ, ಯಾವುದೇ ಮತಗಟ್ಟೆಯಲ್ಲಿ ಮತದಾನ ದಿನದಂದು ಮತದಾನ ಕೇಂದ್ರದ ಒಳಗೆ ಅಥವಾ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಮತಗಳ ಪ್ರಚಾರ ಅಥವಾ ಯಾವುದೇ ಮತದಾರರ ಮತವನ್ನು ಕೇಳುವುದು ಅಥವಾ ಯಾವುದೇ ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕದಂತೆ ಯಾವುದೇ ಮತದಾರರ ಮನವೊಲಿಸುವುದು ಅಥವಾ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಯಾವುದೇ ಮತದಾರರ ಮನವೊಲಿಸುವುದು ಅಥವಾ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸೂಚನೆ ಅಥವಾ ಚಿಹ್ನೆಯನ್ನು ಪ್ರದರ್ಶಿಸುವುದು ನಿಬರ್ಂಧಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

*ಮತದಾನದ ದಿನದಂದು ಅಭ್ಯರ್ಥಿಗಳು ಬಳಸುವ ವಾಹನಗಳ ಕುರಿತು ಮಾರ್ಗಸೂಚಿಗಳು:* ಚುನಾವಣಾ ಉದ್ದೇಶಕ್ಕಾಗಿ ವಾಹನಗಳ ಬಳಕೆಯನ್ನು ಮತದಾನ ದಿನದಂದು ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಲು ಅಭ್ಯರ್ಥಿ ಮತ್ತು ಅವರ ಏಜಂಟ್‍ಗೆ ತಲಾ ಒಂದು ವಾಹನ ಮತ್ತು ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ ಒಂದು ವಾಹನ ಅಂದರೆ ಒಬ್ಬ ಅಭ್ಯರ್ಥಿಯ ಪರವಾಗಿ ಒಟ್ಟು 10 ವಾಹನಗಳಿಗೆ ಮಾತ್ರ ಅನುಮತಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಸಮಯಕ್ಕಿಂತ 48 ಗಂಟೆಗಳ ಅವಧಿಯಲ್ಲಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳು, ಮೆರವಣಿಗೆಗಳು ಇತ್ಯಾದಿಗಳನ್ನು ನಡೆಸಬಾರದು. ಅಲ್ಲದೆ, ಆರ್.ಪಿ ಆಕ್ಟ್ 1951 ರ ಸೆಕ್ಷನ್ 126 ರಲ್ಲಿ ಉಲ್ಲೇಖಿಸಲಾದ ಕಳೆದ 48 ಗಂಟೆಗಳ ಅವಧಿಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಯಾವುದೇ ಚುನಾವಣಾ ವಿಷಯವನ್ನು ಪೂರ್ವಾನುಮತಿ ಇಲ್ಲದೆ ಪ್ರಕಟಿಸಬಾರದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಮತ್ತು ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಸ್ವಿಪ್ ಚೇರಮನ್‍ರಾದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಅವರು ಮಾತನಾಡಿದರು.

Leave a Reply

Your email address will not be published. Required fields are marked *