ಬಾಗಲಕೋಟೆ: ಲೋಕಸಭಾ ಚುನಾವಣಾ ಪ್ರಚಾರಕ್ಕೆ ಇವತ್ತು ವಿಶೇಷ ಕಳೆ ಬಂದಿತ್ತು. ಕಾಂಗ್ರೆಸ್ ನ ಫೈರ್ ಬ್ರಾಂಡ್ ಖ್ಯಾತಿಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೈಗೊಂಡ ಪ್ರಚಾರ ಸಭೆಗಳು ಜಮಖಂಡಿ ಹಾಗೂ ಮುಧೋಳ ಜನತೆಯ ಗಮನಸೆಳೆದವು.
ಜಮಖಂಡಿಯ ಶಿವಾಜಿ ಸರ್ಕಲ್ ನಲ್ಲಿ ನಡೆದ ಮರಾಠಾ ಸಮುದಾಯದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದ ಸಚಿವ ಲಾಡ್ ಅದ್ಭುತ ಭಾಷಣಕ್ಕೆ ಸಭಿಕರ ಮೆಚ್ಚುಗೆ ವ್ಯಕ್ತವಾಯಿತು.
ಮೋದಿ ಸರ್ಕಾರದ ಸುಳ್ಳುಗಳನ್ನು ಅಂಕಿ ಸಂಖ್ಯೆಗಳ ಸಮೇತ ವಿವರಿಸಿದ ಲಾಡ್ ಅವರು, ಈ ಮೋದಿ ಅವರ ಪ್ರಚಾರದ ಗೀಳನ್ನು ಕಟುವಾಗಿ ಟೀಕಿಸಿದರು.
ಮುಧೋಳದಲ್ಲಿಯೂ ಸಹ ಬಿಜೆಪಿ ಸರ್ಕಾರದ ವಿಫಲತೆಗಳ ಬಗ್ಗೆ ಜನರ ಗಮನ ಸೆಳೆದ ಲಾಡ್ ಅವರು ಬಾಗಲಕೋಟೆಯ ಸಮಗ್ರ ಅಭಿವೃದ್ಧಿಗೆ ಸಂಯುಕ್ತಾ ಪಾಟೀಲ್ ಅವರಿವೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಸಭೆಗಳಲ್ಲಿ ಸಚಿವರಾದ ಆರ್ ಬಿ ತಿಮ್ಮಾಪೂರ್, ಮಾಜಿ ಶಾಸಕ ಆನಂದ್ ನ್ಯಾಮಗೌಡ ಸೇರಿದಂತೆ ಹಲವು ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು