July 12, 2025
IMG_20240503_160344

ಧಾರವಾಡ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ಧಾರವಾಡ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನಿಂಗಪ್ಪ ಘಾಟಿನ್ ಅವರು ಕಾಂಗ್ರೆಸ್ ತೊರೆದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ನಿನ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಸಮ್ಮುಖದಲ್ಲಿ ನಿಂಗಪ್ಪ ಘಾಟಿನ್ ಅವರು ತಮ್ಮ ನೂರಾರು ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಳ್ಳಾವರದಲ್ಲಿ ನಡೆದ ಏಕನಾಥ ಶಿಂಧೆ ಅವರ ಬೃಹತ್ ರೋಡ್ ಶೋದಲ್ಲೂ ಘಾಟಿನ್ ಪಾಲ್ಗೊಂಡು ಗಮನಸೆಳೆದರು. ಅಲ್ಲಿಯೇ ತಮ್ಮ ನೂರಾರು ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ತೊರೆದು ಘಾಟಿನ್ ಅವರು ಬಿಜೆಪಿ ಸೇರ್ಪಡೆಯಾದರು.

ನಿಂಗಪ್ಪ ಘಾಟಿನ್ ಅವರು ಸಚಿವ ಸಂತೋಷ ಲಾಡ್ ಅವರ ಬಣದಲ್ಲಿ ಗುರುತಿಸಿಕೊಂಡು ಕಾಂಗ್ರೆಸ್‌ನ ಕಾರ್ಯಕರ್ತರಾಗಿ ಕೆಲಸ ಮಾಡುವುದರ ಜೊತೆಗೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಕೂಡ ಆಯ್ಕೆಯಾಗಿದ್ದರು

Leave a Reply

Your email address will not be published. Required fields are marked *